ಬೆಳ್ತಂಗಡಿ : ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು ಇಲ್ಲಿ ‘ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಲಾಯಿಲ ಗ್ರಾಮದ ಕಾಶಿಬೆಟ್ಟುವಿನ ರಂಜಿತ್ ಕುಮಾರ್ ಆರ್. ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ಡಾಕ್ಟರೇಟ್ ಪದವಿ ಗೌರವ ಲಭಿಸಿದೆ.
ಲಾಯಿಲ ಗ್ರಾಮದ ಕಾಶಿಬೆಟ್ಟುವಿನ ಮಲ್ಲಿಕಾ.ಆರ್. ರವರ ಮಗನಾದ ಇವರು, ಸಂಶೋಧನೆ ಆಧಾರಿತವಾಗಿ ರಾಷ್ಟ್ರೀಯ ಮಟ್ಟದ ಆಡಿ.ಡಾ.ಕೆ.ವಿ ರಾವ್ ಸೈಂಟಿಫಿಕ್ ಸೊಸೈಟಿಯವರು ಪ್ರತಿ ವರ್ಷ ಕೊಡಲ್ಪಡುವ “ಅತ್ಯುತ್ತಮ ಸಂಶೋಧನಾ ಪ್ರಶಸ್ತಿ” ಯನ್ನು 2023ರಲ್ಲಿ ಪಡೆದಿದ್ದು ಕೇಂದ್ರ ಸರಕಾರದ, ಡಿಪಾರ್ಟೆಂಟ್ ಆಫ್ ಸೈನ್ಸ್ & ಟೆಕ್ನಾಲಜಿಯಿಂದ, “ಕ್ಲಿಷ್ಟವಾದ ಸಂಶೋಧನಾ ವಿಷಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವುದು” ಎಂಬ ವಿಷಯದ ಬಗ್ಗೆ ಬರೆದ ಲೇಖನಕ್ಕೆ “ಬೆಸ್ಟ್ ಸೈನ್ಸ್ ಸ್ಟೋರಿ ಅವಾರ್ಡ್” ಪಡೆದುಕೊಂಡಿರುತ್ತಾರೆ.
ಡಾ.ಸುಜಿತ್ ಸರ್ಕಾರ್ ಅವರ ಮಾರ್ಗದರ್ಶನ ಪಡೆದಿದ್ದು, ಸಂಶೋಧನಾ ಅವಧಿಯಲ್ಲಿ 15 ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಸಂತ ತೆರೇಸಾ ಪ್ರೌಢಶಾಲೆ, ವಾಣಿ ಪದವಿ ಪೂರ್ವ ಕಾಲೇಜು ಹಾಗೂ ಉಜಿರೆ ಎಸ್.ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.ಇವರ ಸಹೋದರ ಸುಜಿತ್ ಆರ್.ಸಿವಿಲ್ ಇಂಜಿನಿಯರ್ ಆಗಿ ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ.