ಕೊಕ್ಕಡ: ಸಂಘದ 2022 23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಭವನದಲ್ಲಿ ಸೆಪ್ಟೆಂಬರ್ 13ರಂದು ನಡೆಯಿತು.ಸಂಘದ ಮಹಾಸಭೆಯನ್ನು ಅಧ್ಯಕ್ಷರಾದ ಪೂವಾಜೆ ಕುಶಾಲಪ್ಪ ಗೌಡ ದೀಪ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.
13.50% ಡಿವಿಡೆಂಟ್ ಘೋಷಣೆ: ನಂತರ ಪ್ರಸ್ತಾವಿಕವಾಗಿ ಮಾತನಾಡಿದ ಪೂವಾಜೆ ಕುಶಾಲಪ್ಪ ಗೌಡರು ಸಂಸ್ಥೆಯ ಸೇವೆ ಮಾಡಲು ಅವಕಾಶ ಕೊಟ್ಟಿದ್ದೀರಿ ಸಂಸ್ಥೆಯು ಉತ್ತಮ ಸ್ಥಿತಿಯಲ್ಲಿದ್ದು, ಈ ಬಾರಿ 13 1/2% ಡಿವಿಡೆಂಟ್ ನೀಡುವುದಾಗಿ ತಿಳಿಸಿದರು.ನಮ್ಮ ಸಂಘದ ಉತ್ತಮ ಕೆಲಸಕ್ಕೆ ಡಿಸಿಸಿ ಬ್ಯಾಂಕಿನವರು ಗುರುತಿಸಿ ನಮ್ಮನ್ನು ಸನ್ಮಾನಿಸಿರುತ್ತಾರೆ. ನಮ್ಮ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ ಮತ್ತು ಇತರ ಸಿಬ್ಬಂದಿಗಳ ಶ್ರಮದಿಂದ ಹಾಗೆಯೇ ಸದಸ್ಯರ ಪೂರ್ಣ ಸಹಕಾರದಿಂದ ಈ ಸಾಧನೆ ಮಾಡಲು ನೆರವಾಯಿತು ಎಂದರು.ಸಂಘವು ಈ ವರದಿ ವರ್ಷದಲ್ಲಿ 28.65 ಕೋಟಿ ಠೇವಣಿ ಹೊಂದಿದ್ದು 32.32 ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇಕಡ 98 ರಷ್ಟು ವಸೂಲಾತಿ ಆಗಿರುತ್ತದೆ ವಾರ್ಷಿಕ ರೂಪಾಯಿ 199.33 ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂಪಾಯಿ 1,01,43,083.65 ಲಾಭಗಳಿಸಿ ಆಡಿಟ್ ವರ್ಗಿಕರಣದಲ್ಲಿ ಏ ತರಗತಿ ಪಡೆದುಕೊಂಡಿದೆ ಎಂದರು.
ಬೆಳೆ ವಿಮೆ ಬಗ್ಗೆ ಮಾಹಿತಿ:
ಕೃಷಿ ಅಧಿಕಾರಿಯಾದ ಚಿದಾನಂದ ಹೂಗಾರ್ ರವರು ಬೆಳೆ ವಿಮೆ ಮತ್ತು ರೈತ ನೊಂದಣಿ ಕಾರ್ಡಿನ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಪ್ರಶ್ನೋತ್ತರ:
ಪ್ರಶ್ನೋತ್ತರದ ವೇಳೆ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ರವರು ಮಾತನಾಡಿ ಯಶಸ್ವಿ ಯೋಜನೆ ಸಮರ್ಪಕವಾಗಿ ಸಿಗುತ್ತಿಲ್ಲ ಹಾಸ್ಪಿಟಲ್ ಗೆ ಹೋದರೆ ಅಲ್ಲಿ ಇಲ್ಲಿ ಎಂದು ಅಲೆದಾಡಿಸುತ್ತಾರೆ ಇದರ ಬಗ್ಗೆ ಸಂಘವು ಹೆಚ್ಚಿನ ಗಮನವನ್ನು ಕೊಟ್ಟು ಇದರ ಲೋಪದೋಷವನ್ನು ಪರಿಹರಿಸುವುದರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.
ಸಂಘದ ಸದಸ್ಯರ ಮಕ್ಕಳ ಪೈಕಿ ಎಸ್.ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸಂಘದ ವತಿಯಿಂದ ಸನ್ಮಾನ:
ಎಸ್.ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಲ್ಲಿ ನಿರೀಕ್ಷ, ಭರತೇಶ್, ಅನನ್ಯ ಪಿ, ಹರ್ಷಿತ, ಸುಜಯ, ಸಂದೀಪ್, ನಿಧಿ ಏ, ಅನನ್ಯ, ಪೂಜಾ, ವಿಜೇತ್, ಭವ್ಯಶ್ರೀ ಇವರುಗಳು ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸನ್ಮಾನಿಸಲ್ಪಟ್ಟರು.
ಪಿಯುಸಿ ವಿಭಾಗದಲ್ಲಿ ಸದಸ್ಯರ ಮಕ್ಕಳ ಪೈಕಿ ದೀಕ್ಷಿತ ಪಿಎ, ರೂಪೇಶ್ ಆರ್, ಹಿಶಾ ರವರು ಸನ್ಮಾನಿಸಲ್ಪಟ್ಟರು.
ಸಂಘದ ವ್ಯಾಪ್ತಿಯಲ್ಲಿ ವಿಶೇಷ ಸಾಧಕರಾಗಿ ಉಮೇಶ್ ಗೌಡ ಬಡ ಕೈಲು ರವರನ್ನು ಸನ್ಮಾನಿಸಲಾಯಿತು.
ಸಂಘದಿಂದ ಅತೀ ಹೆಚ್ಚು ಗೊಬ್ಬರ ಖರೀದಿ ಮಾಡಿದ ಪೈಕಿ ಚಿನ್ನಮ್ಮ ಗುಂಪಕಲ್ಲು ಮತ್ತು ಅತಿ ಹೆಚ್ಚು ಕ್ಯಾಂಪ್ಕೋ ಗೆ ಅಡಿಕೆ ಮಾರಾಟ ಮಾಡಿದವರ ಸಂಘದ ಸದಸ್ಯರ ಮತ್ತು ಸದಸ್ಯೇತರರ ಪೈಕಿಯಲ್ಲಿ ಹೊನ್ನಪ್ಪ ಗೌಡ ಪೂವಾಜೆ ಮತ್ತು ವೆಂಕಪ್ಪಗೌಡ ಕೇಚೋಡಿ ಅವರನ್ನು ಸನ್ಮಾನಿಸಲಾಯಿತು
ಇದೇ ಸಾಲಿನಲ್ಲಿ ಸಂಘದ ಸದಸ್ಯರ ಪೈಕಿ ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಅತಿ ಹೆಚ್ಚು ಹಾಲು ಹಾಕಿದವರ ಪೈಕಿ ಆನಂದ ಗೌಡ ದೇವಸ್ಯ ಕೊಡಿ, ಕುಸುಮಾವತಿ ಗುತ್ತುಮನೆ ಪಟ್ಟೂರು, ಭವ್ಯ ಆಲಂಬಿಲ, ಪ್ರಸನ್ನ ಕುಮಾರ್ ಕರ್ಬೀಲ ಮನೆ ಪುತ್ಯೆ ಇವರನ್ನು ಸನ್ಮಾನಿಸಲಾಯಿತು.
ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ನವೀನ್ ಕೆ ಮಂಡಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಈಶ್ವರ ಭಟ್ ಕೆ, ನಿರ್ದೇಶಕರುಗಳಾದ ಜಾರಪ್ಪ ಗೌಡ ಎಸ್, ಮಹಾಬಲ ಶೆಟ್ಟಿ, ಪದ್ಮನಾಭ ಗೌಡ, ವಿಶ್ವನಾಥ ಕೆ, ವಿಠಲ ಭಂಡಾರಿ, ಪ್ರೇಮಾವತಿ, ವೇದಾವತಿ, ವಿಶ್ವನಾಥ ಎಂ.ಕೆ,ಕೇಶವ ಕೆ, ಮೋನಪ್ಪ ಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ನವೀನ್ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ನಿರೀಕ್ಷ ಮತ್ತು ಚೈತನ್ಯ ನೆರವೇರಿಸಿದರು, ಸ್ವಾಗತವನ್ನು ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ಮತ್ತು ಧನ್ಯವಾದಗಳು ಪದ್ಮನಾಭ.ಕೆ ನೆರವೇರಿಸಿದರು.