ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜಿಗೆ ರಾಜ್ಯಮಟ್ಟದ ಹಾಕಿಯಲ್ಲಿ ದ್ವಿತೀಯ ಸ್ಥಾನ

0

ಉಜಿರೆ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಕರ್ನಾಟಕ ಇವರು ನಡೆಸಿದ ಅಂತರ್ ಕಾಲೇಜ್ ರಾಜ್ಯಮಟ್ಟದ ಪುರುಷರ ಹಾಕಿ ಪಂದ್ಯಾಟದಲ್ಲಿ ಉಜಿರೆಯ ಎಸ್ ಡಿ ಎಮ್ ನ್ಯಾಚುರೋಪತಿ ಕಾಲೇಜ್ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತದೆ.

ಬಾಗಲಕೋಟೆಯ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ನಲ್ಲಿ ನಡೆದ ಹಾಕಿ ಪಂದ್ಯಾಟದ ಸೆಮಿ ಫೈನಲ್ ನಲ್ಲಿ ಉಜಿರೆಯ ಎಸ್ ಡಿ ಎಂ ನ್ಯಾಚುರಪಥಿ ಕಾಲೇಜು ತಂಡವು ಬೆಂಗಳೂರು ಮೆಡಿಕಲ್ ಕಾಲೇಜ್ ತಂಡವನ್ನು ಟೈ ಬ್ರೇಕ್ ನಲ್ಲಿ 3-3 ಸಮ ಬಲಗೊಂಡು ನಂತರ ಸಡನ್ ಡೆತ್ತಿನಲ್ಲಿ 1-0 ಅಂಕದಿಂದ ಗೆದ್ದು ಫೈನಲ್ ಪ್ರವೇಶ ಪಡೆಯಿತು, ಫೈನಲ್ ಪಂದ್ಯಾಟದಲ್ಲಿ ಬಾಗಲಕೋಟೆಯ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ತಂಡದೊಂದಿಗೆ ಫೀಲ್ಡ್ ಗೋಲ್ ನಲ್ಲಿ 1-1 ಗೋಲ್ ಸಮಬಲಗೊಂಡು ಟೈ ಬ್ರೇಕ್ ನಲ್ಲಿ 2-1 ಗೋಲ್ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಗೊಂಡಿತು.

ಕಾಲೇಜಿನ ಈ ತಂಡವನ್ನು ಎಸ್‌ ಡಿ ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಪ್ರೊ.ಸತೀಶ್ಚಂದ್ರ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಾಲೇಜಿನ ದೈಹಿಕ ನಿರ್ದೇಶಕ ಧರ್ಮೇಂದ್ರ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here