


ಪಡಂಗಡಿ: ಪಡಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಸೆ.12ರಂದು ಸಂಘದ ಅಧ್ಯಕ್ಷ ಮ್ಯಾಕ್ಸಿಮ್ ಸಿಕ್ವೇರಾ ಅದ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷ ಸುಬ್ರಮಣ್ಯ ಭಟ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರರವರು ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು.ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಶ್ರೀಧರ ಪೂಜಾರಿ, ಕುಣ್ಯಾಪ್ಪ ಮೂಲ್ಯ, ಜಯರಾಜ್ ಬಿ., ದೇಜಪ್ಪ ಕೆ. ಬಾಜಿಲ್ ಫೆರ್ನಾಂಡಿಸ್, ವಸಂತ ಪೂಜಾರಿ, ಸುಂದರ ಪೂಜಾರಿ, ಅಣ್ಣು ನಾಯ್ಕಾ, ಪ್ರಸಾದ್, ಶ್ವೇತಾ, ಅಮಿತಾ ಉಪಸ್ಥಿತರಿದ್ದರು.ಕಾರ್ಯದರ್ಶಿ ಮೇಬಲ್ ಕ್ರಾಸ್ತಾ ವರದಿ, ಲೆಕ್ಕ ಪತ್ರ ಮಂಡಿಸಿದರು.ಕಾರ್ಯಕ್ರಮವನ್ನು ವಸಂತ ನಿರೂಪಿಸಿದರು.

ಸಿಬಂದಿಗಳಾದ ಹೊನ್ನಪ್ಪ ಕುಲಾಲ್, ಗುಲಾಬಿ, ಪ್ರವೀಣ್ ಮೋನಿಸ್ ಸಹಕರಿಸಿದರು.ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಪಡಂಗಡಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಸಂತ ಪೂಜಾರಿ, ಉಪಾದ್ಯಕ್ಷೆಯಾಗಿ ಆಯ್ಕೆಯಾದ ವಸಂತಿ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಸುಜಾತಾ ಶಶಿಧರ್ ಕೋಲ್ಕಾಜೆ, ನಿವೃತ್ತ ಅಂಚೆ ಪಾಲಕ ಪೂವಪ್ಪ ಕೋಟ್ಯಾನ್, ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಾದ ಪೀಟರ್ ಸಿಕ್ವೇರಾ, ಮ್ಯಾಕ್ಷಿಮ್ ಸಿಕ್ವೇರಾ, ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಸದಸ್ಯರಿಗೆ 65% ಬೋನಸ್, ಡಿವಿಡೆಂಡ್ 25% ಘೋಷಿಸಲಾಯಿತು.