ವೇಣೂರು: ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆ ಸೆ.10 ರಂದು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ ಇವರ ಅಧ್ಯಕ್ಷತೆಯಲ್ಲಿ ಶ್ರೀ ಬಾಹುಬಲಿ ಸಭಾ ಭವನದಲ್ಲಿ ಜರಗಿತು.
ಆರ್ಥಿಕ ವರ್ಷದಲ್ಲಿ ಸಂಘವು ನಿವ್ವಳ ರೂ.1,35,45,898/ ಲಾಭ ಗಳಿಸಿ ಶೇ.20 ಡಿವಿಡೆಂಟ್ ಘೋಷಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಹಿರಿಯ 10 ಸದಸ್ಯರನ್ನು, ನಿವೃತ್ತ ಸೈನಿಕ ಹರಿಶ್ಚಂದ್ರ, ಇವರನ್ನು ಸನ್ಮಾನಿಲಾಯಿತು.
ಸಹಕಾರ ಸಂಘದ ವ್ಯಾಪ್ತಿಯ 175 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಯಂತ ಪೂಜಾರಿ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.ನಿರ್ದೇಶಕರುಗಳಾದ ರಾಮದಾಸ್ ನಾಯಕ್, ಸಂದೀಪ್ ಹೆಗ್ಡೆ, ನಾಗಪ್ಪ, ರತ್ನಾಕರ ಬಿ. ಗಣಪತಿ ಪ್ರಸನ್ನ, ದೋಗು ನಾಯ್ಕ ವೀಣಾ, ಆಶಾ, ಎಂ.ಆರ್.ಸಂತೋಷ, ಸುಧೀರ್ ಉಪಸ್ಥಿತರಿದ್ದರು.ಸಿಬ್ಬಂದಿಗಳು ಸಹಕರಿಸಿದರು.
p>