ರಾಜ್ಯಮಟ್ಟದ ಸ್ಪೆಲ್ಬಿ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಮಡಂತ್ಯಾರು: ಅಶೋಕ್ ಇಂಟರ್ ನ್ಯಾಷನಲ್  ಪಬ್ಲಿಕ್ ಸ್ಕೂಲ್, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೆಲ್ ಬಿ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಸಾನಿಯಾ ಲೀರ ನೊರೊನ್ಹ, 8ನೇ ತರಗತಿಯ ಜೇಡನ್ ಡಿಕುನ್ಹ, 7ನೇ ತರಗತಿಯ ನಿಶ್ಚಲ್ ಡಿಸೋಜ, 3ನೇ ತರಗತಿಯ ಜೆರಾನ್ ಡಿಕುನ್ಹ, 3ನೇ ತರಗತಿಯ ಮಹಮ್ಮದ್ ಶಾಲ್ ಇಕ್ಬಾಲ್, 2ನೇ ತರಗತಿಯ ಆಶ್ಲೀನ್ ಡಿಸೋಜ, 5ನೇ ತರಗತಿಯ ಜೇವಿಸ್ ಡಿಕುನ್ಹ,ಮತ್ತು 8ನೇ ತರಗತಿಯ ಅನ್ವಿಲ್ ಡೇಸಾರವರು ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೂ 6ನೇ ತರಗತಿಯ ಧನ್ವಿ ಶೆಟ್ಟಿ ಮತ್ತು ಆಯುಷ್ ಶೆಟ್ಟಿ , 4ನೇ ತರಗತಿಯ ಕ್ಲಿಯೋನ ಡಿಸೋಜ, 5ನೇ ತರಗತಿಯ ಎಲ್ರೋನ್ ಫೆರ್ನಾಂಡಿಸ್ ಮತ್ತು ವೃಷಾ ಸುವರ್ಣ ರವರು ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.ಇವರಿಗೆ ಅನಿಲ್ ಪಿರೇರವರು ಮಾರ್ಗದರ್ಶನವನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here