


ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಇದರ 13ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮವು ಸೆ.9 ರಂದು ಸಾಂತೋಮ್ ಟವರನಲ್ಲಿ ಸಂಘದ ಅಧ್ಯಕ್ಷ ಎ.ಜೆ.ಅನಿಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಜಾರ್ಜ್ ಎಂ.ವಿ., ನಿದೇರ್ಶಕರುಗಳಾದ ಸೆಬಾಸ್ಟೀನ್ ವಿ.ಟಿ, ಅಂದಾನಿ ಕೆ.ಡಿ, ಬಾಬು ತೋಮಸ್, ಬಿಜು.ಪಿ ಪಿ, ಫಿಲೋಮಿನಾ, ಸೋಫಿ ಜೋಸೆಫ್, ಬಿಜು ಎಂ.ಜೆ, ಸೆಬಾಸ್ಟಿನ್ ಹಾಗೂ ಮನೋಜ್ ಪಿ.ಎ ಉಪಸ್ಥಿತರಿದ್ದರು.ಸಂಘಧ ನಿರ್ದೇಶಕ ಜೇಸನ್ ಪಿ.ಎಸ್ ನಿರೂಪಿಸಿದರು.

ಸಿಬ್ಬಂದಿಗಳಾದ ಪ್ರಧಾನ ಕಚೇರಿಯ ಶಾಖಾ ವ್ಯವಸ್ಥಾಪಕರು ರೇಷ್ಮಾ ಅಬ್ರಹಾಂ, ಶಾಖಾ ವ್ಯವಸ್ಥಾಪಕ ಮ್ಯಾಥ್ಯೂ ಕೆ.ಕೆ, ಸ್ಟೆನಿ ಎನ್.ಎಸ್, ಆಲ್ವಿನ್ ಆಂಟನಿ, ಅನುಷಾ ಹಾಗೂ ಸುಶ್ಮಿತಾ ಸಹಕರಿಸಿದರು.