ಶ್ರೀ ಧ.ಮಂ.ಆಂ.ಮಾ.ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಸಂಭ್ರಮ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಗೆ ಆಗಮಿಸುತ್ತಿದ್ದಂತೆ ಸರ್ವಪಳ್ಳಿ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಹಲವಾರು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.ತದನಂತರ ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ಹಾಗೂ ಶಿಕ್ಷಕ ದಿನಾಚರಣೆಯ ಮಹತ್ವ ಹಾಗೂ ಶಿಕ್ಷಕರ ಮಹತ್ವವನ್ನು ವಿವರಿಸಿದರು.ತದನಂತರ ಮಾತನಾಡಿದ ಶ್ರೀಮತಿ.ಶ್ರೀನಿಧಿ ಶಿಕ್ಷಕರಿಂದ ವಿದ್ಯಾರ್ಥಿಗಳು ಯಾವೆಲ್ಲಾ ವಿದ್ಯೆ ಕಲಿಯುತ್ತಾರೆ, ಅವರ ಮಹತ್ವ ನಮ್ಮ ಬದುಕಲ್ಲಿ ಏನಿದೆ? ಶಿಕ್ಷಕರು ತನ್ನೆಲ್ಲಾ ಕಷ್ಟಗಳನ್ನು ಬದಿಗೆ ಇಟ್ಟು ವಿದ್ಯಾರ್ಥಿಗಳ ಬದುಕಿಗೆ ಅವರು ಮಾಡುವ ತ್ಯಾಗಗಳನ್ನು ನೆನಪಿಸಿದರು.ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಶಾಲಾ ಸಂಚಾಲಕರು ವಿದ್ಯಾರ್ಥಿಗಳ ಆಸ್ಥೆಯಿಂದ ತಂದಂತಹ ನೆನಪಿನಕಾಣಿಕೆಯನ್ನು ಶಿಕ್ಷಕರಿಗೆ ನೀಡಿ ಗೌರವಿಸಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಯಿತು.ವಿದ್ಯಾರ್ಥಿಗಳು ತಾವೇ ತಮ್ಮ ಕೈಯಾರೆ ಶಾಲೆಯನ್ನು ಮದುವಣಗಿತ್ತಿಯಂತೆ ಸಿಂಗರಿಸಿದ್ದರು.ಒಟ್ಟಾರೆಯಾಗಿ ಶಿಕ್ಷಕರ ದಿನಾಚರಣೆಯನ್ನ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

p>

LEAVE A REPLY

Please enter your comment!
Please enter your name here