ಮದ್ದಡ್ಕ: ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಗುರುವಾಯನಕೆರೆ ಕುಲಾಲ ಮಂದಿರ ಸಭಾಭವನದಲ್ಲಿ ಸೆ.7ರಂದು ಸಂಘದ ಅಧ್ಯಕ್ಷ ಕೆ.ಗೋಪಾಲ ಶೆಟ್ಟಿ ಅದ್ಯಕ್ಷತೆಯಲ್ಲಿ ನಡೆಯಿತು.
ಉಪಾಧ್ಯಕ್ಷರಾದ ಎ. ಪೂವಪ್ಪ ಭಂಡಾರಿ, ನಿರ್ದೇಶಕರುಗಳಾದ ಕೃಷ್ಣಪ್ಪ ಪೂಜಾರಿ, ಅಣ್ಣ ಶೆಟ್ಟಿ, ಚಿದಾನಂದ ಕೆ.ಪಿ., ರಮೇಶ್ ಪೂಜಾರಿ, ವಿನೋದ ಶೆಟ್ಟಿ, ಭಾರತಿ, ಹೇಮಂತ್ ಶೆಟ್ಟಿ, ರೊನಾಲ್ಡ್ ಸಿಕ್ವೇರಾ, ವಿವೇಕಾನಂದ ಸಾಲ್ಯಾನ್, ಮೋಹನ ನ್ಯಾಕ, ಶ್ರೀಮತಿ ಗಿರಿಜಾ, ಕಾರ್ಯದರ್ಶಿ ಪವಿತ್ರ, ಸಿಬ್ಬಂದಿಗಳಾದ ಗಣೇಶ್ ಎಂ., ಪ್ರಶಾಂತ್ ನಾಯಕ್, ಹೇಮಾವತಿ, ಶೋಭಾ, ಪ್ರಶಾಂತ ಕೆ., ವಿಜೇತ್ ಸಹಕರಿಸಿದರು.
ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ., ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು, ಪಶು ವೈದ್ಯಾಧಿಕಾರಿ ಡಾ.ಸತೀಶ್, ಡಾ.ಪೂಜ ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ನಿರ್ದೇಶಕ ಹೇಮಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪವಿತ್ರ ವರದಿ, ಲೆಕ್ಕ ಪತ್ರ ಮಂಡಿಸಿ ವಂದಿಸಿದರು.
ಸಿಬ್ಬಂದಿಗಳಾದ ಸುಕೇಶ್, ಸಂಘದ ಅಭಿವೃದ್ಧಿ ಬಗ್ಗೆ ಸಂಘದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಎಸ್ ಎಸ್ ಎಲ್ ಸಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಲಿನ್ ಜಾನ್ ಪಾಯ್ಸ್, ಸಂಜನಾ ಎನ್, ನಿಶೆಲ್ ಪಾಯ್ಸ್, ಮೋಕ್ಷಿತಾ, ಸುಪ್ರಿತಾ, ಮಾನ್ವಿತಾ, ಅನುಶ್ರೀ ಜೈನ್, ಯಜ್ನ್ಯಶ್ರೀ, ದ್ವಿತೀಯ ಪಿಯುಸಿಯಲ್ಲಿ ಸಾತ್ವಿಕ್ ಎನ್ ಕೆ., ಹರ್ಷಿಣಿ, ಚಿಂತನಾ, ಪ್ರಕೃತಿ ಎಂ. ಶೆಟ್ಟಿ, ಶಾನ್ ಸಿಕ್ವೇರಾ, ಸ್ವಸ್ತಿಕ್ ಎನ್ ಕೆ. ಸುಪ್ರಿತಾ, ಪ್ರಾರ್ಥನಾ, ಶರತ್, ಮನೀಶ್ ಕುಮಾರ್, ಅನ್ವಿತಾ, ಮಾನಸ, ಮೋಕ್ಷಿತ್, ಸಿಂಚನಾ ಇವರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಹಿತು. ಹಾಗೂ ಸದಸ್ಯರಿಗೆ 65% ಬೋನಸ್, ಡಿವಿಡೆಂಡ್ 25% ಘೋಷಿಸಲಾಯಿತು.