ಬೆಳ್ತಂಗಡಿ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.

ಶಿಕ್ಷಕರಿಗೆ ವಿವಿಧ ರೀತಿಯ ಹೊರಾಂಗಣ ಆಟ ಹಾಗೂ ಒಳಾಂಗಣ ಆಟಗಳನ್ನು ನಡೆಸಿದರು.ವಿಜೇತರಾದ ಶಿಕ್ಷಕರಿಗೆ ಬಹುಮಾನವನ್ನು ನೀಡಿದರು.ಶಿಕ್ಷಕರು ಮಕ್ಕಳ ಪ್ರೀತಿ ಹಾಗೂ ಮುಗ್ದತೆಯಿಂದ ಪ್ರಸನ್ನರಾದರು. ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್ ರವರ ಮಾರ್ಗದರ್ಶನದೊಂದಿಗೆ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲಾ ನಾಯಕ ರಘೋತ್ತಮ್ ನೇತೃತ್ವದಲ್ಲಿ ಶಾಲಾ ಪಾರ್ಲಿಮೆಂಟ್ ಸಚಿವರುಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳು ಜೊತೆಗೂಡಿ ಸಹಕರಿಸಿ, ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here