ಉಜಿರೆ: ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕ-ಬಾಲಕಿಯರ ಫೂಟ್ ಬಾಲ್ ಪಂದ್ಯಾಟವು ಸೆ.4ರಂದು ಅನುಗ್ರಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರುಗಿತು.
ಶಾಲಾ ಸಂಚಾಲಕರಾದ ರೇ!ಫಾ!ಜೇಮ್ಸ್ ಡಿ’ಸೋಜ ರವರು ದೀಪ ಬೆಳಗಿಸುವುದರ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.ಶಾಲಾ ಪ್ರಾಚಾರ್ಯರಾದ ರೇ!ಫಾ! ವಿಜಯ್ ಲೋಬೋರವರು ಪ್ರಾಸ್ತವಿಕವಾಗಿ ಮಾತನಾಡಿದರು.
ತಾಲೂಕು ಕ್ರೀಡಾ ಸಂಯೋಜನಾಧಿಕಾರಿ ಸುಜಯ ಹಾಗೂ ಸಿ.ಆರ್.ಪಿ ಪ್ರತಿಮಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಆಂಟನಿ ಫೆರ್ನಾಂಡೀಸ್, ಪಂಚಾಯತ್ ಸದಸ್ಯರಾದ ಅನಿಲ್ ಡಿಸೋಜಾ, ರಕ್ಷಕರ ಪ್ರತಿನಿಧಿ ಡಾ.ಪ್ರಶಾಂತ್ ಹಾಜರಿದ್ದರು.
ಶಿಕ್ಷಕಿಯರಾದ ವಿನಯಲತಾ ಸ್ವಾಗತಿಸಿ, ಹೇಮಾಲತಾ ವಂದಿಸಿದರು. ಪ್ರಭಾಕರ ಶೆಟ್ಟಿ ಕರ್ಯಕ್ರಮ ನಿರೂಪಿಸಿದರು.
ಈ ಪಂದ್ಯಾಟದಲ್ಲಿ 25 ತಂಡಗಳು ಭಾಗವಹಿಸಿದ್ದವು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ವಸಂತ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಈ ಪಂದ್ಯಾಟವು ಯಶಸ್ವಿಯಾಗಿ ನಡೆಯಿತು.
p>