ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡರಿಗೆ ರೆಖ್ಯ ಗ್ರಾಮ ಸಮಿತಿಯಲ್ಲಿ ಗೌರವ

0

ರೆಖ್ಯ: ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ವತಿಯಿಂದ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ನೂತನ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ನೂತನ ಗ್ರಾಮ ಸಮಿತಿ ರಚನೆ ರೆಖ್ಯಾ ದಲ್ಲಿ ಮಾಡಲಾಯಿತು.ಗ್ರಾಮ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಸ್ವಾಗತಿಸಿದರು.

ರೆಖ್ಯಾ ಕಾಂಗ್ರೆಸ್ ಗ್ರಾಮ ಸಮಿತಿಯ ನೂತನ ಅದ್ಯಕ್ಷರಾಗಿ ಪ್ರಮೋದ್ ರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತೋಮಸ್ ಟಿ.ಜೆ., ಉಪಾಧ್ಯಕ್ಷರಾಗಿ ತುಕಾರಾಂ ಗೌಡ ಹಾಗೂ ಸಜಿ ಪಿ.ಜೆ.ಆಯ್ಕೆಯಾದರು ಹಾಗೂ ಬೂತ್ ಸಮಿತಿ 1 ಅದ್ಯಕ್ಷರಾಗಿ ನಾರಾಯಣ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಗೌಡ, ಬೂತ್ ಏಜೆಂಟ್ ರಾಗಿ ಡೆನ್ನಿಸ್ ಹಾಗೂ ಶಾಂತಪ್ಪ, ಬೂತ್ 2 ರ ಅದ್ಯಕ್ಷರಾಗಿ ಎಂ.ಎ ದೇವಸ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರನ್ ಪಿಳ್ಳೆ, ಉಪಾಧ್ಯಕ್ಷರಾಗಿ ತಂಗಚ್ಚನ್, ಬೂತ್ ಏಜೆಂಟ್ ರಾಗಿ ಜೋಸೆಫ್,,ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿ ವೇಣು ಗೋಪಾಲ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎಸ್.ಕೆ ಹಕೀಮ್ ಕೊಕ್ಕಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ, ಕಾಂಗ್ರೆಸ್ ಮುಖಂಡರಾದ ರಜತ್ ಗೌಡ, ಮುಹಮ್ಮದ್ ಕಲಂದರ್ ಶಾ ಕೊಕ್ಕಡ, ಉಮೇಶ್ ಬಂಗೇರ ಕಾಪಿನಡ್ಕ, ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸುಮಂಗಲಾ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಿಂದೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ತುಕಾರಾಂ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here