ಕೊಕ್ಕಡದಲ್ಲಿ ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ

0

ಕೊಕ್ಕಡ: ಇಲ್ಲಿಯ ಹಲವಾರು ಅಂಗನವಾಡಿಗಳಿಗೆ ಕಳೆದ ವಾರ ಕೊಳೆತ ಮೊಟ್ಟೆಯು ಸರಬರಾಜಾಗಿದ್ದು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಆತಂಕ ಮೂಡಿಸುವಂತಾಗಿದೆ.

ಕೊಕ್ಕಡದ ಅಂಗನವಾಡಿ, ಹಳ್ಳಿಂಗೆರಿ ಅಂಗನವಾಡಿ ಉಪ್ಪಾರಪಳಿಕೆ ಅಂಗನವಾಡಿ,ಸೌತಡ್ಕ ಅಂಗನವಾಡಿ ಹಾಗೂ ಇನ್ನು ಕೆಲವು ಅಂಗನವಾಡಿಗಳಲ್ಲಿ ಬಾಣಂತಿಯರಿಗೆ, ಗರ್ಭಿಣಿಯರಿಗೆ, ಮತ್ತು ಮಕ್ಕಳಿಗೆ ಸರಕಾರ ಕೊಡುವ ಮೊಟ್ಟೆಯಲ್ಲಿ ಹಾಳಾದ ಮೊಟ್ಟೆ ಹುಳ ಬಿದ್ದಿರುವ ಮೊಟ್ಟೆ ಸರಬರಾಜಾಗಿದ್ದು ಅಂತ ಅಂಗನವಾಡಿಗಳಿಗೆ ಪಂಚಾಯತ್ ನ ಸದಸ್ಯರು ಹಾಗೂ ಅಧ್ಯಕ್ಷರುಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೊಟ್ಟೆ ಸರಬರಾಜು ಮಾಡುವವರ ಮೇಲೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುತ್ತಾರೆ.

LEAVE A REPLY

Please enter your comment!
Please enter your name here