ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 2022-23 ನೇ ಸಾಲಿನ 16 ನೇ ವಾರ್ಷಿಕ ಮಹಾಸಭೆ ಸೆ.2 ರಂದು ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಂಕೀರ್ಣದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಪಾಧ್ಯಕ್ಷ ಭಗೀರಥ ಜಿ., ನಿರ್ದೇಶಕರುಗಳಾದ ಮಾಜಿ ಶಾಸಕ ಕೆ.ವಸಂತ ಬಂಗೇರ, ಸುಜಿತಾ ವಿ.ಬಂಗೇರ, ತನುಜಾ ಶೇಖರ, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ.ಡಿ.ಕೆ., ಶೇಖರ ಬಂಗೇರ, ಚಂದ್ರಶೇಖರ್, ಎಚ್.ಧರ್ಣಪ್ಪ ಪೂಜಾರಿ, ಧರಣೇಂದ್ರ ಕುಮಾರ್, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ ಕೆ., ಡಾ.ರಾಜಾರಾಮ್ ಕೆ.ಬಿ., ಜಯವಿಕ್ರಮ್, ಸಂಘದ ವಿಶೇಷ ಅಧಿಕಾರಿ ಎಂ.ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ ಕುಮಾರ್, ವಿವಿಧ ಶಾಖಾ ವ್ಯವಸ್ಥಾಪಕರುಗಳು, ಸಿಬ್ಬಂದಿಗಳು, ಸದಸ್ಯರು ಹಾಜರಿದ್ದರು.
ಸಭೆಯಲ್ಲಿ ಸದಸ್ಯರಿಗೆ ಇತರ ಬ್ಯಾಂಕ್ ಗೆ ಹಣದ ವ್ಯವಹಾರಕ್ಕಾಗಿ ನೂತನ ಐ.ಎಫ್.ಎಸ್.ಸಿ ಕೋಡ್ ಅನಾವರಣಗೊಳಿಸಲಾಯಿತು.
ಆರ್ಥಿಕ ವರ್ಷದಲ್ಲಿ ಸಂಘ ರೂ.2.26 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.15 ಡಿವಿಡೆಂಟ್ ಘೋಷಣೆ ಮಾಡಲಾಯಿತು.ಉಭಯ ಜಿಲ್ಲೆಯಲ್ಲಿಪ್ರಸ್ತುತ 21 ಶಾಖೆಯನ್ನು ಹೊಂದಿದ್ದು ಪುತ್ತೂರಿನ ಪುರುಷರ ಕಟ್ಟಿಯಲ್ಲಿ 22 ನೇ ಶಾಖೆ ಪ್ರಾರಂಭವಾಗಲಿದೆ.ಮುಂದಕ್ಕೆ ಮೈಸೂರು ಪ್ರಾಂತ್ಯಕ್ಕೆ 8 ಜಿಲ್ಲೆಗೆ ವಿಸ್ತರಣೆ ಮಾಡಲಾಗಿದೆ. ಶೀಘ್ರದಲ್ಲಿಯೇ ಸಂಘದ ಸ್ವಂತ ನಿಧಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ಉದ್ಘಾಟನೆ ಗೊಳ್ಳಲಿದೆ ಎಂದು ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಹೇಳಿದರು.