ಅರಸಿನಮಕ್ಕಿ-ಕಳೆಂಜ ರಸ್ತೆಯ ಸೇಡಿ ಎಂಬಲ್ಲಿ ಸಂಪೂರ್ಣವಾಗಿ ಹದಗೆಟ್ಟ ರಸ್ತೆ

0

ಶಿಬರಾಜೆ: ಅರಸಿನಮಕ್ಕಿಯಿಂದ ಕಳೆಂಜ ಬರುವ ಮಾರ್ಗ ಮಧ್ಯೆ ಶೇಡಿ ಎಂಬಲ್ಲಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರಿಗೆ ಆ ಜಾಗದಲ್ಲಿ ಓಡಿಸಲು ತುಂಬಾ ಕಷ್ಟ ಪಡುತ್ತಿದ್ದು ಹಾಗೂ ಈ ರಸ್ತೆ ಸಮಸ್ಯೆಯಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು ಸವಾರರಿ ಗಂತು ತುಂಬಾ ಪ್ರಾಣಸಂಕಟವಾಗುತ್ತಿದೆ.

ಈಗಾಗಲೇ ಸ್ಥಳೀಯರು ತುಂಬಾ ಸಲ ಈ ರಸ್ತೆಯನ್ನು ಮಣ್ಣು ಹಾಕಿ ಸರಿಪಡಿಸಿದ್ದು, ಆದರೆ ದೊಡ್ಡ ಗಾತ್ರದ ವಾಹನ ಚಲಿಸುವುದರಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ.

ಈ ರಸ್ತೆಯು ಇಳಿಜಾರಿನ ರೂಪದಲ್ಲಿದ್ದು ಹದಗೆಟ್ಟ ಜಾಗದ ಸ್ವಲ್ಪ ಮುಂದೆ ದೊಡ್ಡ ತಿರುವನ್ನು ಹೊಂದಿದ್ದು, ಇನ್ನೂ ಹೆಚ್ಚಿನ ಅಪಘಾತಕ್ಕೆ ಕಾರಣವಾಗುವ ಮುನ್ನ ಈ ರಸ್ತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿಕೊಟ್ಟು ಸಮಸ್ಯೆಯನ್ನು ಬಗೆಹರಿಸಬೇಕಾಗಿ ಪ್ರಯಾಣಿಕರುಗಳು ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here