ಯಾಂತ್ರೀಕೃತ ಭತ್ತ ಬೇಸಾಯದ ‘ಯಂತ್ರಶ್ರೀ’ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ವತಿಯಿಂದ 2023-24ನೇ ಸಾಲಿನ ರಾಜ್ಯದ 15000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಿಸಲಿರುವ ಯಾಂತ್ರೀಕೃತ ಭತ್ತ ಬೇಸಾಯದ ಯಂತ್ರಶ್ರೀ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಕಾರ್ಯಕ್ರಮವು ಸೆ.1 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಿತು.

ಯಾಂತ್ರೀಕೃತ ಭತ್ತ ಬೇಸಾಯದ ಯಂತ್ರಶ್ರೀ ಕಾರ್ಯಕ್ರಮಕ್ಕೆ ಮುಖ್ಯ ಮಹಾಪ್ರಬಂಧಕರರು, ನಬಾರ್ಡ್ ಪ್ರಾದೇಶಿಕ ಕಚೇರಿ ಬೆಂಗಳೂರಿನ ಟಿ.ರಮೇಶ್ ಅವರು ವಿದ್ಯುಕ್ತ ಚಾಲನೆ ನೀಡಿ ಯಂತ್ರಶ್ರೀ ಸಾಧಕ ರೈತರಿಗೆ ಸನ್ಮಾನಿಸಿ, ರೈತರಿಗೆ ನರ್ಸರಿ ಟ್ರೇ ವಿತರಿಸಿದರು.

ಯಾಂತ್ರೀಕೃತ ಭತ್ತ ಬೇಸಾಯದ ಮಾಹಿತಿ ಪತ್ರವನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ಡಾ.ಎಲ್ ಹೆಚ್ ಮಂಜುನಾಥ್ ಬಿಡುಗಡೆಗೊಳಿಸಿದರು.

ದ.ಕ.ಜಿಲ್ಲೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಹೆಚ್ ಕೆಂಪೇಗೌಡ ಅವರು ಯಂತ್ರಶ್ರೀ ಸಾಧಕರಿಗೆ ಸನ್ಮಾನಿಸಿದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಟ್ರಸ್ಟಿ ಸಂಪತ್ ಸಾಮ್ರಾಜ್ಯ ಅವರು ಕೇಂದ್ರಿಕೃತ ಭತ್ತದ ರ್ನಸರಿ ಮಾಡಿದ ರೈತರಿಗೆ ಸನ್ಮಾನಿಸಿದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ನಬಾರ್ಡ್ ಜಿಲ್ಲಾ ಕಚೇರಿಯ ಜಿಲ್ಲಾ ಅಭಿವೃದ್ಧಿ ಪ್ರಬಂಧಕರು ಸಂಗೀತಾ ಎಸ್.ಕರ್ತ, ಸಿರಿ ಉತ್ಪನ್ನಗಳ ಎಂ.ಡಿ.ಜನಾರ್ಧನ್‌, ಸೀತಾರಾಮ್, ಕಡಮಾಜೆ ಫಾರ್ಮ್ ನ ಪ್ರಗತಿಪರ ಕೃಷಿಕ ಜಯಪ್ರಕಾಶ್ ಉಪಸ್ಥಿತರಿದ್ದರು.

ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ,ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಹಾಗೂ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.

ಕಾರ್ಯಕ್ರಮ ರೈತಗೀತೆ ಹಾಡುವ ಮೂಲಕ ಪ್ರಾರಂಭಗೊಂಡಿತು.ಸಿ.ಹೆಚ್.ಎಸ್.ಸಿ ಪ್ರಾದೇಶಿಕ ನಿರ್ದೇಶಕ ಅಬ್ರಹಾಂ ಎಂ.ಕೆ ಸ್ವಾಗತಿಸಿ, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ವಂದಿಸಿದರು.ರಾಮ್ ಕುಮಾರ್ ರ್ಮನಾಡ್ ನಿರೂಪಿಸಿದರು.

LEAVE A REPLY

Please enter your comment!
Please enter your name here