ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ರಿ. ಬೆಳ್ತಂಗಡಿ ತಾಲೂಕು ಇದರ 14 ನೇ ವರ್ಷದ ಮಹಾಸಭೆಯ ಅಳದಂಗಡಿ ದೀಪಾ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ದ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಎಂ.ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಭಾಗವಸಿದ್ದರು. ವೇದಿಕೆಯಲ್ಲಿ ಗೌರವ ಅಧ್ಯಕ್ಷ ಸುನಿಲ್ ಲೋಬೋ,ಉಪಾಧ್ಯಕ್ಷ ಜೋಸೆಫ್ ಕೆ. ಡಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ಬಿ. ಯಚ್, ತಾಲೂಕು ಶಾಮಿಯಾನ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ವಸಂತ್ ನಾವೂರು ಹಾಗೂ ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಸಮೀರ್ ಹಾಜರಿದ್ದರು. ಗುರುದೇವ ಕಾಲೇಜಿನ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪಾಧ್ಯಕ್ಷ ಜೋಸೆಫ್ ಕೆ.ಡಿ ಸ್ವಾಗತಿಸಿದರು.
ಕೋಶಾಧಿಕಾರಿ ರೋಹಿತ್ ಕುಮಾರ್ ಲೆಕ್ಕಾಚಾರ ಮಂಡಿಸಿದರು. ಕಾರ್ಯದರ್ಶಿ ವಸಂತ್ ನಾವೂರು ಇವರು ಸಂಘ ದ ವಾರ್ಷಿಕ ವರದಿ ವಾಚಿಸಿದರು. ಸಂಘದ ಹಿರಿಯ ಸದಸ್ಯರಾದ ಲಕ್ಷ್ಮಣ್,ಜೋಸೆಫ್ ಕೆ. ಡಿ,ನಾರಾಯಣ ಗೌಡ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಡೆಯಿತು. ಜಿಲ್ಲಾ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಮಾತಾಡಿ ಜಿಲ್ಲಾ ಸಂಘವು ತಾಲೂಕಿನ ಸಂಘದ ಜೊತೆ ಯಾವತ್ತೂ ಇರುವುದರ ಜೊತೆಗೆ ತಾಲೂಕು ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲೂಕು ಸಂಘ ಅಧ್ಯಕ್ಷ ಚಂದ್ರಶೇಖರ ಎಂ. ಮಾತಾಡಿ ಪ್ರತಿಯೊಬ್ಬ ಸದಸ್ಯನೂ ಕಡ್ಡಾಯವಾಗಿ ಸಂಘದ ಸದಸ್ಯತ್ವ ಪಡೆಯಬೇಕೆಂದು ತಿಳಿಸಿದರು.ಸದಸ್ಯರ ಮಾಥುಕುಟ್ಟಿ ಧನ್ಯವಾದವನ್ನಿತ್ತರು.ಕಾರ್ಯಕ್ರಮದಲ್ಲಿ ಮಾಲೀಕರಿಂದ ಕೆಲಸಗಾರರಿಗೆ ಪೋಸ್ಟಲ್ ಇನ್ಸೂರೆನ್ಸ್ ಮಾಡಿ ಕೊಡಲಾಯಿತು.