ಬೆಳ್ತಂಗಡಿ: ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ರೂ.227 ಕೋಟಿ ವ್ಯವಹಾರ, ಸದಸ್ಯರಿಗೆ ಶೇ.25% ಡಿವಿಡೆಂಡ್

0

ಬೆಳ್ತಂಗಡಿ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ.26ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ಜರಗಿತು.ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರಿಗೆ ಶೇ 25% ಡಿವಿಡೆಂಡ್ ಘೋಷಿಸಿದರು.ಸಂಘವು 2022-23ನೇ ಸಾಲಿನಲ್ಲಿ ರೂ. 227.12ಕೋಟಿ ವ್ಯವಹಾರ ನಡೆಸಿ ರೂ. 1ಕೋಟಿ ಲಾಭ ಗಳಿಸಿದೆ. ರೂ. 77.19ಕೋಟಿ ಠೇವಣಿ ಸಂಗ್ರಹವಾಗಿದೆ.ಸಂಘದಲ್ಲಿ ಒಟ್ಟು 6477 ಸದಸ್ಯರನ್ನು ಹೊಂದಿದ್ದು ರೂ. 85ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘವು 27ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಈ ಸಂದರ್ಭದಲ್ಲಿ ಸಂಘಕ್ಕೆ ಸ್ವಂತ ಕಟ್ಟಡಕ್ಕೆ ಸ್ಥಳ ಖರೀದಿಸಲಾಗಿದೆ ಎಂದು ಅಧ್ಯಕ್ಷರು ಮಹಾಸಭೆಯಲ್ಲಿ ತಿಳಿಸಿದರು.

ಇದೆ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ 25ಮಕ್ಕಳಿಗೆ ರೂ 2.50ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ, ನಿರ್ದೇಶಕರುಗಳಾದ ಜೇಮ್ಸ್ ಡಿಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟರ್ ಸಲ್ಡಾನ್ಹ, ಅಲ್ಫೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್. ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಶ್ರೀಮತಿ ಪೌಲಿನ್ ರೇಗೊ, ಶ್ರೀಮತಿ ಪ್ಲಾವಿಯಾ ಡಿಸೋಜ, ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿಸೋಜ, ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿಸೋಜ, ಕೇಂದ್ರ ಕಛೇರಿ ವ್ಯವಸ್ಥಾಪಕಿ ಕು. ಮಲ್ಲಿಕಾ ಮೊನಿಸ್, ವೇಣೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶಾಂತಿ ಸಿ. ಡಿ., ಸಿಬಂದಿಗಳಾದ ಮೀನಾ ಮಿರಾಂದ, ಸುನಿತಾ ಪೈಸ್, ಸೀಮಾ ಡಿಸೋಜ, ಅಜಯ್ ರೊಡ್ರಿಗಸ್, ವಿಲ್ಫ್ರೆಡ್ ಡಿಸೋಜ, ಲ್ಯಾನ್ಸಿ ಲೋಬೊ, ಜಾನೆಟ್ ಜೆಸ್ವಿಟಾ ಕ್ರಾಸ್ತಾ, ಪ್ರತಿಮಾ ಪ್ಲಾವಿಯಾ ಕ್ರಾಸ್ತಾ, ರಶ್ಮಿ ಲೋಬೊ, ರೋಯಲ್ ಮೊರಾಸ್, ಜೋಯಲ್ ಡಿಸೋಜ ಸಹಕರಿಸಿದರು.

ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ವರದಿ, ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ ವಂದಿಸಿದರು. ನಿರ್ದೇಶಕ ವಿನಯ್ ಜಾನ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಮಹಾಸಭೆಯಲ್ಲಿ ಸ್ಥಾಪಕ ಪ್ರವರ್ತಕ ಪೀಟರ್ ಕ್ಯಾಲಿಸ್ಟ್ ಡಿಸೋಜಾ, ಪ್ರಾಂಕಿ ಡಿಸೋಜಾ, ಮಾಜಿ ನಿರ್ದೇಶಕರು ಲ್ಯಾನ್ಸಿ ಪಿರೇರಾ, ಜಾನ್ ಅರ್ವಿನ್ ಡಿಸೋಜಾ, ಅಲ್ಫೋನ್ಸ್ ಫ್ರಾಂಕೊ, ಪಾಯ್ಸ್, ಜೋಸೆಫೀನ್ ಪಿಂಟೊ, ರುಡಾಲ್ಫ್, ಜೋಕಿಮ್ ಕ್ರಾಸ್ತಾ, ಲಾರೆನ್ಸ್ ಡೆಸಾ, ವಲೇರಿಯನ್ ಪಾಯ್ಸ್, ಆಲ್ಬರ್ಟ್ ಡಿಸೋಜಾ ಹಾಗೂ ಸದಸ್ಯರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here