




ಉಜಿರೆ: ಕಲ್ಮಂಜ ಗ್ರಾಮದ ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆ.23ರಂದು ಯಕ್ಷಭಾರತಿ ರಿ. ಕನ್ಯಾಡಿ ಬೆಳ್ತಂಗಡಿ ತಂಡದಿಂದ ಯಕ್ಷಗಾನ ತಾಳಮದ್ದಳೆ ತ್ರಿಶಂಕು ಸ್ವರ್ಗ ಪ್ರದರ್ಶನಗೊಂಡಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ವಾಸುದೇವ ಆಚಾರ್ಯ ಉಜಿರೆ ಮತ್ತು ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.
ಮುಮ್ಮೇಳದಲ್ಲಿ ತ್ರಿಶಂಕುವಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ವಾಸಿಷ್ಠರಾಗಿ ಶಶಿಧರ ಕನ್ಯಾಡಿ, ವಿಶ್ವಾಮಿತ್ರನಾಗಿ ಸುರೇಶ ಕುದ್ರೆಂತಾಯ ಉಜಿರೆ, ದೇವೇಂದ್ರನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಪಾತ್ರ ನಿರ್ವಹಿಸಿದರು.ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕಲಾವಿದರರನ್ನು ಶಾಲು ಹಾಕಿ ಗೌರವಿಸಿದರು.









