ಧರ್ಮಸ್ಥಳಕ್ಕೆ ಅವಹೇಳನ ಮಾಡಿದವರು ಕ್ಷೇತ್ರಕ್ಕೆ ಬರಬಾರದು: ಧರ್ಮಸ್ಥಳ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ, ಗ್ರಾಮ ಪಂಚಾಯತ್ ಗೆ ಮನವಿ

0

ಧರ್ಮಸ್ಥಳ: ಸೌಜನ್ಯ ಕೇಸ್ ಹಿನ್ನಲೆಯಾಗಿಟ್ಟುಕೊಂಡು ಹೋರಾಡುತ್ತಿರುವವರು ದುರುದ್ದೇಶವನ್ನು ಇಟ್ಟುಕೊಂಡು ಧರ್ಮಸ್ಥಳ ಕ್ಷೇತ್ರದ ಮೇಲೆ ಕಳಂಕ ಹಚ್ಚುತ್ತಿದ್ದಾರೆ. ಅಲ್ಲದೇ, ಕ್ಷೇತ್ರವನ್ನು ವಿರೋಧಿಸುವವರು, ಕ್ಷೇತ್ರದ ಜನರನ್ನು ಹೀಗಳೆಯುವವರು, ಧರ್ಮಸ್ಥಳದ ವಿರೋಧಿ ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳು ಹಾಗೂ ಅವರಿಂದ ಪ್ರಭಾವಿತರಾದವರು ಸಹ ಬೇರೆ ಬೇರೆ ಸಂಘಟನೆಗಳ ಹೆಸರಿನ ಅಡಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಗುಂಪುಕಟ್ಟಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರವೇಶಿಸಿ ಅಶಾಂತಿ ಮೂಡಿಸುವ ಸಾಧ್ಯತೆಯಿದೆ.

ಅವರ ದುರುದ್ದೇಶಿತ ಕಾರ್ಯವನ್ನು ಕಾರ್ಯಗತಗೊಳಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಶಾಂತಿ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅವರ ಯಾವುದೇ ಪ್ರಯತ್ನವನ್ನು ಜೀವದಾಸೆ ಬಿಟ್ಟು ಹತ್ತಿಕ್ಕಲು ಗ್ರಾಮಸ್ಥರು ಒಂದಾಗಿ ನಿರ್ಧರಿಸಿದ್ದೇವೆಂದು ನಿರ್ಧರಿಸಿರುವ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮನವಿ ನೀಡಿದರು.

ಅಶಾಂತಿ,ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಮನವಿ:
ಧರ್ಮಸ್ಥಳದಿಂದ ನೂರಾರು ಗ್ರಾಮಸ್ಥರು ಕಾಲ್ನಡಿಗೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಾಗಿ ಪೊಲೀಸ್ ಆಧಿಕಾರಿ ಸಮರ್ಥ ಗಾಣಿಗೇರ್ ರವರಿಗೆ ಮನವಿ ಸಲ್ಲಿಸಿದರು. ನಂತರ ಗ್ರಾಮ ಪಂಚಾಯತ್ ಗೂ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಪೊಲೀಸ್ ಅಧಿಕಾರಿ ಹಾಗೂ ಗ್ರಾ.ಪಂ.ಉಪಾಧ್ಯಕ್ಷ, ಗ್ರಾ.ಪಂ.ಪಿಡಿಒ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here