ಬೆಳ್ತಂಗಡಿ: ಗೌರವಾನ್ವಿತ ನ್ಯಾಯಾಧೀಶರು ನರೇಂದ್ರ ಕುಮಾರ್ ಜೈನ್, ಚೇರ್ಮ್ಯಾನ್ ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಮಿಷನರ್ ದೆಹಲಿ ಇವರು ಮತ್ತು ಬೆಂಗಳೂರು ಮತ್ತು ಮಂಗಳೂರು ಶಿಕ್ಷಣ ಇಲಾಖೆಯ ಮುಖ್ಯಸ್ಥರೊಡನೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಸಂತ ತೆರೇಸಾ ಪ್ರೌಢಶಾಲೆಗೆ ವಿಧ್ಯುಕ್ತವಾಗಿ ಭೇಟಿ ನೀಡಿ ಶಿಕ್ಷಕ ವೃಂದದೊಡನೆ ಭಾರತೀಯ ಸಂವಿಧಾನದ ಅಲ್ಪಸಂಖ್ಯಾತ ವರ್ಗದವರಿಗೆ ನೀಡಿದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳೊಡನೆ ತಮ್ಮ ಅಮೂಲ್ಯ ಸಮಯ ವಿನಿಯೋಗಿಸುತ್ತಾ ಜೀವನದ ನಿರ್ದಿಷ್ಟ ಗುರಿಯಿಂದ ಹೇಗೆ ವಿವಿಧ ಕ್ಷೇತ್ರಗಳಲ್ಲಿ ಬೆಳೆಯಬಹುದು ಎಂದು ಪ್ರೇರೆಪಿಸಿದರು.
ಶಾಲಾ ವಾದ್ಯ ಮೇಳದೊಂದಿಗೆ ಹಾಗೂ ಪುಷ್ಪ ಗುಚ್ಚ ನೀಡಿ ಮುಖ್ಯಶಿಕ್ಷಕಿ ವಂ.ಭ. ಲೀನಾ ಡಿಸೋಜ ಸ್ವಾಗತಿಸಿದರು.
p>