ಕೊಕ್ಕಡ ಶ್ರೀ ಲಕ್ಷ್ಮಿ ಮೆಡಿಕಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಉಚಿತ ಬಿಪಿ ಶುಗರ್ ತಪಾಸಣಾ ಶಿಬಿರ ಯಶಸ್ವಿ

0

ಕೊಕ್ಕಡ: ಶ್ರೀ ಲಕ್ಷ್ಮೀ ಮೆಡಿಕಲ್ ಮಾಲಕರಾದ ಸುವಿನ್ ಡಿ ಇವರ ಆಶಯದಂತೆ ಆ.21ರಂದು ಕೊಕ್ಕಡದ ಲಕ್ಷ್ಮಿ ಮೆಡಿಕಲ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಬಿಪಿ ಶುಗರ್ ತಪಾಸಣಾ ಶಿಬಿರ ನಡೆಯಿತು.

ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಲಕ್ಷ್ಮಿ ಮೆಡಿಕಲ್ ಮಾಲಕರಾದ ಸುವೀನ್.ಡಿ ಅವರು ಸಂತಸ ವ್ಯಕ್ತಪಡಿಸಿದರು ಸುಮಾರು 500ಕ್ಕೂ ಹೆಚ್ಚು ಜನ ಶಿಬಿರಕ್ಕೆ ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.ವಿಶೇಷವಾಗಿ ದಿವ್ಯಾಂಗತರಿಗೆ ಸ್ಪಂದಿಸಿ ಅವರಿಗೂ ಉತ್ತಮ ರೀತಿಯ ಚಿಕಿತ್ಸೆ ದೊರಕುವಂತೆ ಮಾಡಿದರು.


ಸಂದರ್ಶಕ ವೈದ್ಯರುಗಳಾದ
1.ಡಾಕ್ಟರ್ ಹರ್ಷಿತಾ ಸುವೀನ್, ಶ್ರೀ ದುರ್ಗಾ ಕ್ಲಿನಿಕ್ ಆಸಿನಮಕ್ಕಿ & ಶ್ರೀ ಬೆನಕ ಕ್ಲಿನಿಕ್ ಉದನೆ,

2.ಡಾಕ್ಟರ್ ಅಕ್ಷತಾ ಸಿ.ಜೆ, ಮನೋರೋಗ ವೈದ್ಯರು

3. ಡಾಕ್ಟರ್ ವಿದ್ಯಾ ವಿ.ಎನ್, ಮಕ್ಕಳ ಆರೋಗ್ಯ ಸಲಹೆಗಾರರು ಇವರು ಸುಮಾರು 6:00 ಗಂಟೆವರೆಗೂ ಇದ್ದು ಆರೋಗ್ಯ ತಪಾಸಣೆ ನಡೆಸಿದರು.

ಮಾಧ್ಯಮದ ಜೊತೆ ಮಾತನಾಡಿದ ಶಿಬಿರ ಆಯೋಜಕರಾದ ಸುವೀನ್ ಅವರು ಶಿಬಿರಕ್ಕೆ ಬಂದು ಸಹಕರಿಸಿದ ವೈದ್ಯರ ಬಳಗಕ್ಕೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

p>

LEAVE A REPLY

Please enter your comment!
Please enter your name here