ಬೆಳ್ತಂಗಡಿ: ಪುಷ್ಪಾನುಗ್ರಹ ಕನ್ನಡ ಭಕ್ತಿಗೀತೆ ಬಿಡುಗಡೆ

0

ಬೆಳ್ತಂಗಡಿ: ಶ್ರೀ ಪದ್ಮಾವತೀ ದೇವಿಯ ಕುರಿತಾಗಿ ಟಿ.ಎನ್.ಕ್ರಿಯೆಷನ್ ಪ್ರಸ್ತುತ ಪಡಿಸಿರುವ ಸುರೇಂದ್ರ ಜೈನ್ ನಾರಾವಿ ನಿರ್ದೇಶನ ಮತ್ತು ಪರಿಕಲ್ಪನೆಯ ಹಾಗೂ ಪಾರ್ಶ್ವನಾಥ ಜೈನ್ ಕಕ್ಯಪದವು ಸಾಹಿತ್ಯ ರಚಿಸಿರುವ ಪುಷ್ಟಾನುಗ್ರಹ ಕನ್ನಡ ಭಕ್ತಿಗೀತೆ ಇತ್ತೀಚೆಗೆ ಶ್ರಾವಣ ಶುಕ್ರವಾರ ಶ್ರೀ ರತ್ನತ್ರಯ ತೀರ್ಥಕ್ಷೇತ್ರ ಬೆಳ್ತಂಗಡಿಯಲ್ಲಿ ಬಸದಿಯ ಆಡಳಿತ ಮೋಕ್ತೆಸರಾದ ಕೆ. ಜಯವರ್ಮ ರಾಜ ಬಳ್ಳಾಲ್ ಲೋಕಾರ್ಪಣೆ ಮಾಡಿದರು.

ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಜಿನ ಬಸದಿಗಳಿಂದ ಸಂಗ್ರಹಿಸಿರುವ ಶ್ರೀ ಪದ್ಮಾವತೀ ಅಮ್ಮನವರ ಸಚಿತ್ರ ಮತ್ತು ದೃಶ್ಯ ಸಂಯೋಜನೆಯ ಮೊತ್ತ ಮೊದಲ ವಿನೂತನ ಭಕ್ತಿಗೀತೆಯೇ ಈ ಪುಷ್ಟಾನುಗ್ರಹ.ಜಯಶ್ರೀ ಬೆಳ್ತಂಗಡಿ ಗೀತೆಗೆ ಧ್ವನಿಯಾಗಿದ್ದು ಕು.ಬ್ರಾಹ್ಮೀ ಜೈನ್ ಅಭಿನಯಿಸಿದ್ದಾರೆ.

ಡಾ.ಸನ್ಮತಿ ಕುಮಾರ್ ಮೂಡಬಿದ್ರೆ, ಡಾ. ವಂದನಾ ಜೈನ್ ಬೆಳ್ತಂಗಡಿ, ಪ್ರದೀಪ್ ಜೈನ್ ಈದು, ಪದ್ಮ ಪ್ರಸಾದ್ ಜೈನ್ ಕುತ್ಲೂರು, ಶ್ರವಣ್ ಜೈನ್ ಕುತ್ಲೂರು, ರಂಜನ್ ಜೈನ್ ಕುತ್ಲೂರು, ಸಂದೇಶ್ ಜೈನ್ ನೆಲ್ಲಿಕಾರು ನಿರ್ಮಾಣದಲ್ಲಿ ಸಹಕರಿಸಿದ್ದಾರೆ.ಗಣೇಶ್ ಹೆಗ್ಡೆ ನಾರಾವಿ ಅವರ ಅಭಿನಯ ವಿಡಿಯೋ ಚಿತ್ರೀಕರಣ, ಪವಿತ್ ಕಕ್ಯಪದವು ಅವರ ಸಂಕಲನವಿದೆ.

ರಕ್ಷಿತ್ ರೈ ಅವರ ತಾಂತ್ರಿಕ ಸಲಹೆ ಹಾಗೂ ಶಿಕ್ಷಕ ಧರಣೇಂದ್ರ ಕುಮಾರ್ ಬೆಳ್ತಂಗಡಿ, ಸಂದೇಶ ಜೈನ್ ಬೆಳ್ತಂಗಡಿ ಶ್ರೀಕೀರ್ತಿ ಇಂದ್ರ ಬೈಲಂಗಡಿ ಹಾಗೂ ಸೂರಜ್ ಜೈನ್ ನಾರಾವಿ ತಾಂತ್ರಿಕ ಸಹಕಾರ ನೀಡಿದ್ದಾರೆ. ಈ ಭಕ್ತಿ ಗೀತೆಯ ವೀಡಿಯೋ ಆಲ್ಬಂ ತೆಲಿಕೆ ನಲಿಕೆ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.

p>

LEAVE A REPLY

Please enter your comment!
Please enter your name here