

ಮುಂಡಾಜೆ: 2022-23ನೇ ಸಾಲಿನಲ್ಲಿ ಸದಸ್ಯರಿಂದ ಬರಬೇಕಾಗಿರುವ ಎಲ್ಲಾ ವಿಧದ ಸಾಲಗಳನ್ನು ಶೇಕಡಾ ನೂರು ವಸೂಲಿ ಮಾಡಿದ ಮುಂಡಾಜೆ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಎಸ್.ಸಿ.ಡಿ.ಸಿ.ಸಿ ವಿಶೇಷ ಸಾಲ ವಸೂಲಾತಿ ಸಾಧನಾ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಮಂಗಳೂರಿನಲ್ಲಿ ನಡೆದ ಎಸ್ ಸಿ ಡಿ ಸಿ ಸಿ ಮಹಾಸಭೆಯಲ್ಲಿ ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನೂಜಿ ಜನಾರ್ಧನ ಗೌಡ,ಕಾರ್ಯನಿರ್ವಾಹಣಾಧಿಕಾರಿ ಚಂದ್ರಕಾಂತ್ ರವರಿಗೆ ಸಂಘದ ಪರವಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ರಾಜ್ಯಾಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ಮುಂಡಾಜೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಪ್ರಕಾಶ್ ನಾರಾಯಣ ರಾವ್, ನಿವೃತ್ತ ಸಿಇಒ ನಾರಾಯಣ ಫಡ್ಕೆ ಉಪಸ್ಥಿತರಿದ್ದರು.ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ಪ್ರಮುಖರು ವೇದಿಕೆಯಲ್ಲಿದ್ದರು.