ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ನ್ಯಾಯತರ್ಪು ಕಳಿಯ ಇದರ ಪೂರ್ವಭಾವಿ ಸಭೆ

0

ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ನ್ಯಾಯತರ್ಪು ಕಳಿಯ ಇದರ ಆಶ್ರಯದಲ್ಲಿ ಆ.17ರಂದು ಗೇರುಕಟ್ಟೆ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ವರಮಹಾಲಕ್ಷ್ಮಿ ಸಮಿತಿಯ ರಚನೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಸುಭಾಷಿಣಿ.ಕೆ, ಉಪಾಧ್ಯಕ್ಷರಾಗಿ ಶಾಲಿನಿ ಸತೀಶ್, ಕಾರ್ಯದರ್ಶಿ ಪುಷ್ಪ ನ್ಯಾಯತರ್ಪು, ಜೊತೆ ಕಾರ್ಯದರ್ಶಿ ಕುಸುಮಾವತಿ ಬರಾಯ, ಕೋಶಾಧಿಕಾರಿ ಪ್ರತಿಭಾ.ಎಂ ಗೇರುಕಟ್ಟೆ ಆಯ್ಕೆ ಯಾಗಿರುತ್ತಾರೆ.

ಈ ಸಭೆಯಲ್ಲಿ ಕಳಿಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ದಿವಾಕರ.ಎಂ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಕುಸುಮ.ಎನ್ ಬಂಗೇರ, ಗ್ರಾಮ ಸಮಿತಿಯ ಅಧ್ಯಕ್ಷರಾದ ವಿಜಯ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್ ಮಜಲ್ ಮತ್ತು ಪುಷ್ಪ ಹಾಗೂ ವರಮಹಾಲಕ್ಷ್ಮಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷೆ ಮಮತಾರವರು ಹಾಗೂ ನ್ಯಾಯತರ್ಪು ಒಕ್ಕೂಟದ ಅಧ್ಯಕ್ಷ ಜನಾರ್ದನ ಗೌಡ ಮತ್ತು ಕಳಿಯ.ಬಿ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಮೇರ್ಲ ಹಾಗೂ ಪದಾಧಿಕಾರಿಗಳು, ಬೆಳ್ತಂಗಡಿ ವಲಯದ ಮೇಲ್ವಿಚಾರಕ ಹರೀಶ್ ಗೌಡ ಮತ್ತು ಕೃಷಿ ಮೇಲ್ವಿಚಾರಕರಾದ ರಾಮ್ ಕುಮಾರ್ ಮತ್ತು ಸೇವಪ್ರತಿನಿದಿಗಳು ಭಾಗವಹಿಸಿ ಕಾರ್ಯಕ್ರಮದ ರೂಪುರೇಷೆ, ಖರ್ಚ್ಚು ವೆಚ್ಚ ಮತ್ತು 25/08/23 ರಂದು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

p>

LEAVE A REPLY

Please enter your comment!
Please enter your name here