ಸಾವ್ಯ ಸ.ಉ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

0

ಸಾವ್ಯ: ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಸಾವ್ಯ ಶಾಲೆಯಲ್ಲಿ 77ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಎಸ್.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಪೂಜಾರಿ ವಹಿಸಿದ್ದರು.

ಸಭೆಯಲ್ಲಿ ಉಪಾಧ್ಯಕ್ಷೆ ರಮಣಿ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಹರೀಶ್ ಹೆಗ್ಡೆ, ಸುಜಾತ, ಧ್ವಜ ಕಟ್ಟೆ ಕೊಡುಗೆದಾರರಾದ ರಾಜೇಶ್ ಕೊರಂಬಾಡು, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಸ್ತಿಕ್ ಉಪಸ್ಥಿತರಿದ್ದರು.ನಿವೃತ್ತ ಅಡುಗೆ ಸಿಬ್ಬಂದಿ ಶಕುಂತಲಾ ಮತ್ತು ಗೌರವ ಶಿಕ್ಷಕಿ ನವ್ಯರವರನ್ನು ಸನ್ಮಾನಿಸಲಾಯಿತು.

ಸ್ವಾತಂತ್ರೋತ್ಸವ ಪ್ರಯುಕ್ತ ನಡೆಸಿದ ಸ್ಪರ್ಧೆಗಳಿಗೆ ಹರೀಶ್ ಹೆಗ್ಡೆ ಗ್ರಾಮ್ ಪಂಚಾಯಿತ್ ಸದಸ್ಯರ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು.ಮಕ್ಕಳಿಂದ ಸ್ವಾತಂತ್ರ ಹೋರಾಟಗಾರರ ವೇಷಭೂಷಣ ಪ್ರದರ್ಶನ ನಡೆಯಿತು.ಮಕ್ಕಳಿಂದ ಭಾಷಣ, ಮನರಂಜನ ಕಾರ್ಯಕ್ರಮ ನೀಡಲಾಯಿತು.

ಸಂತೋಷ್ ಕುಮಾರ್ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು.ಶ್ರೀಮತಿ ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಪಂಜು ವಂದಿಸಿದರು.ರೆನ್ನೀ ಫೆರ್ನಾಂಡಿಸ್ ಮತ್ತು ಅರ್ಚನಾ ಬಹುಮಾನೀತರ ಪಟ್ಟಿ ವಾಚಿಸಿದರು.ಶರ್ಮಿಳ ಮತ್ತು ಸುಮಿತ್ರ ಸನ್ಮಾನಿತರ ಪತ್ರ ವಾಚಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here