


ಹೊಕ್ಕಾಡಿಗೋಳಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯು ಹೊಕ್ಕಾಡಿಗೋಳಿ ಕೇಂದ್ರ ಮೈದಾನದಲ್ಲಿ ಜರಗಿತು.ಧ್ವಜಾರೋಹಣವನ್ನು ಉದ್ಯಮಿ ಸಂದೀಪ್ ಶೆಟ್ಟಿ ಪೊಡುoಬ ಹೊಸಮನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ್.ಎಚ್, ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕರು ವೀರಪ್ಪ ಪರವ, ದಿನೇಶ್ ಹುಲಿಮೇರು, ಸುರೇಶ್. ಎಂ. ಶೆಟ್ಟಿ ಹಕ್ಕೇರಿ, ಗ್ರಾಮ ಪಂಚಾಯತ್ ಸದಸ್ಯೆ ಲೀಲಾ, ಪ್ರಭಾಕರ್ ಪೂಜಾರಿ ಮೈರಬೆಟ್ಟು, ನವೀನ್ ಪೂಜಾರಿ ಮೈರಬೆಟ್ಟು, ಸದಾಶಿವ ಹುಲಿಮೇರು ಇನ್ನಿತರರು ಉಪಸ್ಥಿತರಿದ್ದರು.


ನಂತರ ಸ್ಥಳೀಯ ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ, ಪಿಲ್ಲoಬುಗೋಳಿ ತಂಡ ಪ್ರಥಮ, ಕೆ.ಕೆ.ಫ್ರೆಂಡ್ಸ್ ಕೈರೋಡಿ ದ್ವಿತೀಯ ಸ್ಥಾನ ಗಳಿಸಿತು.ಪುರುಷರ ಹಗ್ಗ ಜಗ್ಗಟ, ಮಕ್ಕಳ ಹಗ್ಗಜಗ್ಗಾಟ, ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ದಯಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸುರೇಶ್.ಎಚ್.ಹೊಕ್ಕಾಡಿಗೋಳಿ ಸ್ವಾಗತಿಸಿ, ಧನ್ಯವಾದ ನೀಡಿದರು.









