ಕೊಯ್ಯೂರು: 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಆಶ್ರಯದಲ್ಲಿ JMF ಡಾ.ಪ್ರಶಾಂತ ನಾಯ್ಕ ಬೈಂದೂರು, ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ, ಹಾಗೂ ಪೂರ್ವಾಧ್ಯಕ್ಷರು, ಜೆಸಿಐ ಮಂಗಳ ಗಂಗೋತ್ರಿ ಕೊಣಾಜೆ ಇವರು ಸಂಗ್ರಹಿಸಿರುವ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಅನೇಕ ಐತಿಹಾಸಿಕ ಘಟನೆಗಳ ಛಾಯಾಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು.
ಧ್ವಜಾರೋಹಣ ಮಾಡಿ ಮಾತಾನಾಡಿದ ಪ್ರೊ. ಪ್ರಶಾಂತ ನಾಯ್ಕ ದೇಶಕ್ಕೋಸ್ಕರ ತಮ್ಮ ಜೀವಜೀವನವನ್ನೇ ಮುಡಿಪಾಗಿಟ್ಟು ಬ್ರಿಟಿಷ್ ವಸಾಹತುಶಾಹಿಯ ಆಡಳಿತದ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವಾರ್ಪಣೆ ಸಲ್ಲಿಸುವುದು ನಮ್ಮ ಕರ್ತವ್ಯ.ಒಳ್ಳೆಯ ಮನಸ್ಸಿನಿಂದ ಉತ್ತಮ ಕಾರ್ಯದಲ್ಲಿ ತೊಡಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಷ್ತ್ರದ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಟಿ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ವಾತಂತ್ರ್ಯ ಅಂದರೆ ಸ್ವೇಚ್ಛಾಚಾರದಿಂದ ಬದುಕುವುದಿಲ್ಲ.ನಮಗೆ ಸಂವಿಧಾನ ನೀಡಿರುವ ಕರ್ತವ್ಯಗಳು ಮತ್ತು ಹಕ್ಕುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶ ಕಟ್ಟುವ ಕೆಲಸದಲ್ಲಿ ನೆರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿ.ಡೊಂಬಯ್ಯ ಗೌಡ ಜೇಂಕಿನಡ್ಕ ಇವರ ಸ್ಮರಣಾರ್ಥ ಕೊಡುಗೆಯ ನೂತನ ಧ್ವಜಸ್ಥಂಭದ ಉದ್ಘಾಟನೆಯನ್ನು ಅವರ ಪತ್ನಿ ಗೀತಾ ಅವರು ನೆರೆವೇರಿಸಿದರು.ಮುಖ್ಯ ಅತಿಥಿಗಳಾಗಿ ಜೇಸಿ ನಾರಾಯಣ ಶೆಟ್ಟಿ ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ, ಉಪಾಧ್ಯಕ್ಷಹರೀಶ್ ಕುಮಾರ್ ಮತ್ತು ಸದಸ್ಯರುಗಳಾದ ಲೋಕೇಶ್ ಪಾಂಬೇಲು, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರಾದ ದಾಮೋದರ ಗೌಡ ಬೆರ್ಕೆ, ರಮೇಶ್ ಗೌಡ ಮೈಂದಕೋಡಿ, ಹಳ್ಳಿಮನೆ ಹೈದರಾಲಿ ಶಾಲೆಯ ಮುಖ್ಯಮಂತ್ರಿ ಪೂರ್ಣೇಶ್ ಶಿಕ್ಷಕಿ ಗೀತಾ ಉಡುಪಿ, ದೀಪ್ತಿ ಹೆಗ್ಡೆ, ಪ್ರವೀಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧ್ವಜಸ್ತಂಬದ ದಾನಿಗಳಾದ ಗೀತಾ ಡೊಂಬಯ್ಯ ಗೌಡ ಜೆಂಕಿನಡ್ಕ, ಸ್ವಾತಂತ್ರ್ಯ ಹೋರಾಟದ ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡಿದ ಪ್ರೊ.ಪ್ರಶಾಂತ ನಾಯ್ಕ ಬೈಂದೂರು ಇವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಮೋಹನದಾಸ ಕಾರ್ಯಕ್ರಮ ನಿರೂಪಣೆ ಮಾಡಿದರು.ಬೇಬಿ ಸ್ವಾಗತಿಸಿದರು.ರಾಮಚಂದ್ರ ದೊಡಮನಿ ಭಾರತ ಸ್ವಾತಂತ್ರ್ಯ ಹೋರಾಟದ ಪಕ್ಷಿನೋಟದ ವಿವರ ನೀಡಿದರು. ವಿದ್ಯಾರ್ಥಿಗಳ ಪರವಾಗಿ ಕುಮಾರಿ ನಿಶ್ಮಿತ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು.ಸುಧಾಕರ ಶೆಟ್ಟಿ ವಂದಿಸಿದರು.ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ, ಚಂದ್ರಶೇಖರ್ ಅಜಾದ್, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಕಾರ್ಯಕ್ರಮದ ಒಂದು ಮುಖ್ಯ ಆಕರ್ಷಣೀಯವಾಗಿತ್ತು.ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.