ಬೆಳ್ತಂಗಡಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ದಯಾ ವಿಶೇಷ ಶಾಲೆಯ ಮಕ್ಕಳಿಗೆ ಬೆಡ್‌ ಶೀಟ್ ಮತ್ತು ಟವಲ್ ವಿತರಣೆ

0

ಬೆಳ್ತಂಗಡಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ಕಾರವಾರ ಬೆಳ್ತಂಗಡಿ ಶಾಖೆ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಯಾ ವಿಶೇಷ ಮಕ್ಕಳ ಶಾಲೆ ಕೊಯ್ಯೂರಿ 150 ಮಕ್ಕಳಿಗೆ ಬೆಡ್‌ಶೀಟ್, ಟವಲ್ ಹಾಗೂ ಸಿಹಿತಿಂಡಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ನಿರ್ದೇಶಕರಾದ ವಂದನೀಯ ಫಾ|ವಿನೋದ್‌ ಮಸ್ಕರೇನಸ್‌ ರವರು ಧ್ವಜರೋಹಣವನ್ನು ನೆರವೆರಿಸಿದರು.

ಸಹ ನಿರ್ದೇಶಕರಾದ ವಂದನಿಯ ಫಾ| ರೋಹನ್ ಲೋಬೊ ಉಪಸ್ಥಿತರಿದ್ದರು.ಹಾಗೂ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಲಿ., ಬೆಳ್ತಂಗಡಿಯ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here