ನಾಪತ್ತೆಯಾಗಿದ್ದ ಉರ್ನಡ್ಕ ನಿವಾಸಿ ಲೋಕೇಶ್ ರವರ ಮೃತದೇಹ ಪತ್ತೆ

0

ರೆಖ್ಯಾ: ಇಲ್ಲಿಯ ಉರ್ನಡ್ಕ ನಿವಾಸಿ ಲೋಕೇಶ್ ಎಂಬವರು ಆ.14ರಂದು ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಮೃತದೇಹವು ನೇಲ್ಯಡ್ಕ ಹಿ.ಪ್ರಾ.ಶಾಲಾ ಹಿಂಬದಿಯ ನದಿಯಲ್ಲಿ ಆ.16 ರಂದು ಮಧ್ಯಾಹ್ನ ಪತ್ತೆಯಾಗಿದೆ.

ಆ15 ರಂದು ಬೆಳಗ್ಗಿನಿಂದ ಶೌರ್ಯ ವಿಪತ್ತು ತಂಡ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಮತ್ತು ಊರವರ ಜಂಟಿ ಕಾರ್ಯಾಚರಣೆಯಲ್ಲಿ ಶವ ಪತ್ತೆ ಹಚ್ಚಲಾಗಿದೆ.

ಮೃತದೇಹ ದೊರೆತ ಸ್ಥಳವು ಕಡಬ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ

LEAVE A REPLY

Please enter your comment!
Please enter your name here