ಕೊರಂಜ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಗೇರುಕಟ್ಟೆ: ಕೊರಂಜ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕಳಿಯ ಗ್ರಾಮ ಪಂಚಾಯತ್ ಸದಸ್ಯ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಬಿ.ನೆರವೇರಿಸಿದರು.ಶಾಲಾ ಮುಖ್ಯ ಶಿಕ್ಷಕರು ಶಾಂತಾ ಎಸ್.ಶುಭ ಹಾರೈಸಿದರು.

ಸಭಾ ಕಾರ್ಯಕ್ರಮ: ಶಾಲಾ ಹಿರಿಯ ವಿಧ್ಯಾರ್ಥಿಗಳಾದ ಕಳಿಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಕೆ.ಮತ್ತು ಮಚ್ಚಿನ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಚಂದ್ರಕಾಂತ್ ರವರನ್ನು ಹಾಗೂ ಕಳಿಯ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯರಾದ ಶೇಖರ ಎಮ್.ನಸೀಮಾ, ಪ್ರೇಮ ಶೆಟ್ಟಿ ಯವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಕಳಿಯ ಗ್ರಾ.ಪಂ. ನೂತನ ಅಧ್ಯಕ್ಷ ದಿವಾಕರ ಎಮ್, ಉಪಾಧ್ಯಕ್ಷೆ ಇಂದಿರಾ.ಬಿ.ಶೆಟ್ಟಿ, ಸದಸ್ಯರಾದ ಕುಸುಮ ಎನ್., ವಿಜಯ ಗೌಡ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಕೊರಂಜ ಶಾಲಾ ಅಧ್ಯಕ್ಷ ಜಯಾನಂದ ಶೆಟ್ಟಿ,ಢ ಉಪಾಧ್ಯಕ್ಷೆ ನಸೀಮ ಹಾಗೂ ಸದಸ್ಯರು. ಶಿಕ್ಷಕರು ಹಿರಿಯ ವಿದ್ಯಾರ್ಥಿಗಳು.ಪೋಷಕರು ಕಾರ್ಯಕ್ರಮದಲ್ಲಿ ಬಾಗವಹಿಸಿದರು.

ಕೊಡುಗೆ: ಚಂದ್ರಕಾಂತ ನಿಡ್ಡಾಜೆ- ಶಾಲಾ ಪ್ರಯೋಗಾಲಯದ ಕಪಾಟು, ಶೇಖರ ಮುದ್ದುಂಜ ಫ್ಯಾನ್, ಪ್ರೇಮಾ ಶೆಟ್ಟಿ -2 ಫ್ಯಾನ್ ಕೊಡುಗೆ ನೀಡಿದರು.

ಶಾಲಾ ಮಕ್ಕಳಿಂದ ಭಾಷಣ, ದೇಶ ಭಕ್ತಿ ಗೀತೆ ಗಾಯನ ನಡೆಯಿತು.ಗೇರುಕಟ್ಟೆ ಸ್ನೇಹ ಸಂಗಮ ಆಟೋ-ಚಾಲಕ ಮಾಲಕರ ಸಂಘದಿಂದ ಮತ್ತು ವಿಧ್ಯಾಭಿಮಾನಿಗಳ ವಿವಿಧ ಬಗೆಯ ತಿಂಡಿಗಳನ್ನು ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here