ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಇದರ ನೇತೃತ್ವದಲ್ಲಿ ಹೆಚ್.ಐ.ವಿ ಸೋಂಕಿತ ಹಾಗೂ ಬಾಧಿತ ವಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ 77ನೇ ಸ್ವಾತಂತ್ರ ದಿನಾಚರಣೆ ಮತ್ತು ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಆ.15ರಂದು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಹಮ್ಮಿಕೊಳ್ಳಲಾಯಿತು.
ನವಚೈತನ್ಯ ಸಂಘದ ಅಧ್ಯಕ್ಷೆ ಲಲಿತಾ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಂಡಿಬಾಗಿಲು ಸಂತ ತೋಮಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ.ಜೋಸ್ ಆಯಾಂಕುಡಿ ಇವರು ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿ ಶುಭ ಹಾರೈಸಿದರು.
ಶಿರ್ಲಾಲು ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾದರ್ ಮಾಥ್ಯೂ ತಾಯೆ ಕಾಟಿಲ್ ಇವರು ಕಾರ್ಯಕ್ರಮಕ್ಕೆ ಶುಭಾ ಹಾರೈಸಿದರು.
ಶಿರ್ಲಾಲು ಚರ್ಚಿನ ಪಿ.ಟಿ.ಎ ಅಧ್ಯಕ್ಷರಾದ ಜಯೇಶ್ ಹಾಗೂ ಗಂಡಿ ಬಾಗಿಲು ಚರ್ಚಿನ ವಿನ್ಸೆಂಟ್ ಡಿ ಪೌಲ್ ಘಟಕದ ಅಧ್ಯಕ್ಷರಾದ ಚಾಂಡಿರವರು ವೇದಿಕೆಯಲ್ಲಿ ಉಪಸ್ಥತರಿದ್ದರು.ಗಂಡಿಬಾಗಿಲು ಚರ್ಚನ ವಿನ್ಸೆಂಟ್ ಡಿ ಪೌಲ್ ಘಟಕದಿಂದ ಸಹಾಯ ನೀಡಿದರು.ಶಿರ್ಲಾಲು ಚರ್ಚಿನ ಎಸ್.ಎಂ.ವೈ.ಎಂ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
ಡಿ ಕೆ ಆರ್ ಡಿ ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯ್ ಎ ಜೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಮೂಲಕ ನಡೆಸುವ ಕಾರ್ಯಕ್ರಮದ ಕುರಿತು ವಿತರಿಸಿದರು. ಸಂಸ್ಥೆಯ ಸಿಬ್ಬಂದಿಯಾದ ಶ್ರೀಮತಿ ಸಿಸಿಲಿಯರವರು ಸ್ವಾಗತಿಸಿ, ಶ್ರೀ ಜಾನ್ಸನ್ ರವರು ವಂದಿಸಿದರು.ಕಾರ್ಯಕ್ರಮವನ್ನು ಕುಮಾರಿ ಶ್ರೇಯಾ ರವರು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಗಂಡಿ ಬಾಗಿಲು ಚರ್ಚಿನ ವಿನ್ಸೆಂಟ್ ಡಿ ಪಾಲ್ ಸೊಸೈಟಿ ಇದರ ಪದಾಧಿಕಾರಿಗಳು, ಶಿರ್ಲಾಲು ಚರ್ಚಿನ ಎಸ್ ಎಂ ವೈ ಎಂ ಘಟಕದ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ನವಚೈತನ್ಯಾ ಸಂಘದ ಸದಸ್ಯರು ಹಾಜರಿದ್ದರು.