ಕೊಕ್ಕಡ ಅಮೃತ ಗ್ರಾಮಪಂಚಾಯತ್ ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ

0

ಕೊಕ್ಕಡ ಅಮೃತ ಗ್ರಾಮಪಂಚಾಯತ್ ನಲ್ಲಿ ನಡೆದ ಸ್ವಾತಂತ್ರೋತ್ಸವ ಧ್ವಜಾರೋಹಣ ಮುಂಡುರ್ಪಲಿಕೆಯ ನಾಗೇಶ್ ನಿವೃತ್ತ ಸೈನಿಕರು ನೆರವೇರಿಸಿ ಶುಭ ಹಾರೈಸಿದರು.ಬಳಿಕ ಅಮೃತ ಪಂಚಾಯತ್ ಅಮೃತ ಸರೋವರದಲ್ಲಿ ಧ್ವಜಾರೋಹಣವನ್ನು ಗ್ರಾಮಪಂಚಾಯತ್ ಅಧ್ಯಕ್ಷೆ ಬೇಬಿ ನೆರವೇರಿಸಿದರು.

ಈ ಸಂದರ್ಭ ನಿವೃತ್ತ ಸೈನಿಕರದ ನಾಗೇಶ್ ರವರನ್ನು ಹಾಗೂ ನಿವೃತ್ತ ಸೈನಿಕರು ಕೊಕ್ಕಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ರವರನ್ನು ಪಂಚಾಯತ್ ವತಿಯಿಂದ ಗೌರವಿಸಲಾಯಿತು.ಆ ಬಳಿಕ ಮಾತನಾಡಿ ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಸೈನಿಕ ನಾಗೇಶರವರು ನುಡಿದರು.ಪಂಚಾಯತ್ ಅಧ್ಯಕ್ಷರು ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪಂಚಾಯತಿ ಉಪಾಧ್ಯಕ್ಷರು ಪ್ರಭಾಕರ್ ಗೌಡ, ನಿಕಟಪೂರ್ವ ಅಧ್ಯಕ್ಷರು ಯೋಗೀಶ್ ಆಳಂಬಿಲ, ನಿಕಟಪೂರ್ವ ಉಪಾಧ್ಯಕ್ಷೆ ಪವಿತ್ರ, ಸದಸ್ಯರುಗಳಾದ ಜಗದೀಶ್, ಪುರಷೋತ್ತಮ, ವಿಶ್ವನಾಥ್, ಶರತ್ ಕುಮಾರ್, ಪಂಚಾಯತ್ ಕಾರ್ಯದರ್ಶಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here