ಮುಂಡಾಜೆ: ಪದವಿ ಪೂರ್ವ ಕಾಲೇಜು ಮುಂಡಾಜೆ ಆ.14ರಂದು ಪೋಕ್ಸೋ ಕಾಯ್ದೆಯ ಕುರಿತು ಹಾಗೂ ಮಾದಕ ವಸ್ತುಗಳ ವಿರುದ್ಧದ ಕಾನೂನು ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು.ಬೆಳ್ತಂಗಡಿಯ ವಕೀಲರಾದ ಶಿವಯ್ಯ ಎಸ್ ಎಲ್ ಇವರು ಹದಿಹರೆಯದ ಬಾಲಕಿಯರ ವಿರುದ್ಧದ ಲೈಂಗಿಕ ದೌರ್ಜನ್ಯ ಅಪರಾಧಗಳ ವಿರುದ್ಧ ವಿದ್ಯಾರ್ಥಿಗಳನ್ನು ಎಚ್ಚರಿಸಿ ಈ ಕಾನೂನಿನಡಿಯಲ್ಲಿ ನ್ಯಾಯಾಲಯದಲ್ಲಿ ನೀಡುವ ಶಿಕ್ಷೆಗಳನ್ನು ವಿವರಿಸಿದರು.
ಹಾಗೆಯೇ ಮಾರಕ ಡ್ರಗ್ಸ್ ಸೇವನೆ ಹಾಗೂ ಅದರ ಮಾರಾಟದ ವಿರುದ್ಧ ಇರುವ ಕಾಯ್ದೆಗಳ ಮಾಹಿತಿ ನೀಡಿ ಜಾಗೃತರಾಗಿ ಇರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಹಿರಿಯ ಉಪನ್ಯಾಸಕಿ ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೂನಿಯರ್ ರೆಡ್ ಕ್ರಾಸ್ ಸಂಯೋಜಕರಾದ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು.ಕಾನೂನು ಸಾಕ್ಷರತಾ ಕ್ಲಬ್ ಸಂಚಾಲಕ ಸುಭಾಷ್ ಚಂದ್ರ ಜೈನ್ ವಂದಿಸಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ನಮಿತಾ ಕೆ ಆರ್ ವಂದಿಸಿದರು.ಎಲ್ಲಾ ಉಪನ್ಯಾಸಕ ವರ್ಗ ಮತ್ತು ಇತರ ಸಿಬ್ಬಂದಿ ವರ್ಗದವರು ಸಹಕರಿಸಿದರು.
p>