ಕಕ್ಕಿಂಜೆ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಬಿ .ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್( ರಿ) ಇದರ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಿತು.
ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷ ಹರೀಶ್ ರಾವ್ ಎಂ ಕಾರ್ಯಕ್ರಮ ಕ್ಕೆ ಚಲನೆ ನೀಡಿದರು.ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉತ್ತಮ ಸೇವೆಗೆ ಆಭಿನಂದನೆ ಸಲ್ಲಿಸಿದರು. ಯಚ್.ಐ.ವಿ ಪೀಡಿತರಿಗೆ ಕೊರೋನ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ಬಗ್ಗೆ ತಿಳಿಸಿದರು.
ಸ್ವಾಗತಿಸಿ ಪ್ರಸ್ಧಾವಿಕ ಭಾಷಣ ಮಾಡಿದ ಡಾ. ಮುರಳಿಕೃಷ ಇರ್ವತ್ರಾಯ ಶೀ ಕೃಷ್ಣ ಆರೋಗ್ಯ ಕಾರ್ಡ್ ಮಾಹಿತಿ ನೀಡಿದರು ಕಾರ್ಡ್ ಮಾಡಿದ 15 ನಂತರ 20% ಚಿಕಿತ್ಸೆಯಲ್ಲಿ ಕಡಿತವಾಗುತ್ತದೆ.
ಅಧ್ಯಕ್ಷತೇಯ ವಹಿಸಿದ MRPL ಜನರಲ್ ಮ್ಯಾನೇಜನ್ ಡಾ.ರುಡಾಲ್ಫ್ ನೊರೊನ್ಹಾ ಡಾ, ಮುರಳಿ ದಂಪತಿಗಳಿಗೆ ಆಭಿನಂದನೆ ಸಲ್ಲಿಸಿ ಮಾತನಾಡಿದರು.ವಿದ್ಯಾಭಾಸ ಮಾಡುತ್ತಿರುವಾಗಲೇ ಶಿಸ್ತು, ಸಭ್ಯತೆಗೆ ಒತ್ತು ನೀಡುತ್ತಿದ್ದರು ಡಾ.ಮುರಳಿಯವರಿಗೆ ಪದ್ಮಶೀ ಪ್ರಶಸ್ತಿ ಬರುವಂತೆ ಆಗಲಿ ಎಂದು ಶುಭ ಹಾರೈಸಿದರು.
ಶ್ರೀ ಕೃಷ್ಣ ಆರೋಗ್ಯ ಕಾರ್ಡ್ ಗೆ ಚಾಲನೆ: ಶ್ರೀ ಕೃಷ್ಣ ಆರೋಗ್ಯ ಕಾರ್ಡ್ ಗೆ ಚಾಲನೆ ನೀಡಿ ಸಂಕೇತವಾಗಿ ವಿತರಣೆ ಮಾಡಿದರು.ಕಾರ್ಯಕ್ರಮದಲ್ಲಿ ತೋಟತ್ತಾಡಿ ವಿಕಾರ್ ಸಂತ ಅಂತೋನಿ ಚರ್ಚ್ ರೆ.ಫಾ.ಜೋಸ್ ಪೂವತಿಂಕಲ್, ಕಾಜೂರ್ ದುರ್ಗ ಶರೀಫ್ ಪ್ರಧಾನ ಕಾರ್ಯದರ್ಶಿ ಜೆ.ಎಚ್.ಆಬುಬಕ್ಕರ್ ಸಿದ್ದಿಕ್, ವಸುಧ, ಉಪಸ್ಧಿತರಿದ್ದರು.ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ.ವಂದನಾ ಎಂ. ಇರ್ವತ್ರಾಯ ಧನ್ಯವಾದ ಸಲ್ಲಿಸಿ, ಹಾರೀಶ್ ನಿರೂಪಿಸಿದರು.