ಚಾರ್ಮಾಡಿ: ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆ- ಜಾನುವಾರು ಸಹಿತ ಓವ೯ ಬಂಧನ

0

ಚಾರ್ಮಾಡಿ: ಮಾಂಸಕ್ಕಾಗಿ ಅಕ್ರಮವಾಗಿ ವಾಹನದಲ್ಲಿ ಜಾನುವಾರು ಸಾಗಾಟದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಓರ್ವನನ್ನು ಬಂಧಿಸಿದ ಘಟನೆ ಆ.13ರಂದು ವರದಿಯಾಗಿದೆ.

ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಅತಿವೇಗದಲ್ಲಿ ಕೆ ಎ 18 ಸಿ 2855 ನೇ ನೊಂದಣಿ ಸಂಖ್ಯೆಯ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳ ಠಾಣಾ ಪೊಲೀಸರು ತಡೆದಿದ್ದು, ಈ ವೇಳೆ ಬಂಟ್ವಾಳ ಸಾಲೆತ್ತೂರು ನಿವಾಸಿ ಹಮೀದ್ ಎಂಬಾತನು ಪರಾರಿಯಾಗಿರುತ್ತಾನೆ.

ಸದರಿ ವಾಹನದ ಚಾಲಕನನ್ನು ವಿಚಾರಿಸಿದಾಗ, ಆತ ಮೂಡಿಗೆರೆ ಕೂಡಹಳ್ಳಿ ಗ್ರಾಮದ ಕೆ .ಕೆ ಪದ್ಮಶ್ (41ವ) ಎಂಬುದಾಗಿ ತಿಳಿದುಬಂದಿದೆ.

ವಾಹನವನ್ನು ಪರಿಶೀಲಿಸಲಾಗಿ 3 ಜಾನುವಾರುಗಳು ಪತ್ತೆಯಾಗಿದೆ . ಈ ಬಗ್ಗೆ ಧರ್ಮಸ್ಥಳ ಪೊಲೀಸ್ 57/2023 TWO: 5,7,8,9,12 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020 ಮತ್ತು ಕಲಂ:66 ಜೊತೆಗೆ 192(ಎ) ಐ ಎಂ ವಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

p>

LEAVE A REPLY

Please enter your comment!
Please enter your name here