ಕುಕ್ಕೆಡಿ: ಕುಕ್ಕೇಡಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಆ.12 ರಂದು ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.ಶಾಲಾ ಮಕ್ಕಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಕಾಯ೯ಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನವೀನ್ ಎ. ಸ್ವಾಗತಿಸಿ, ಗ್ರಂಥಪಾಲಕರ ಪಿತಾಮಹಾ ಎಸ್ ಆರ್, ರಂಗನಾಥ ಅವರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಗ್ರಂಥಪಾಲಕಿ, ಸಂಜೀವಿನಿ ಎಂ ಬಿ ಕೆ ಭಾಗವಹಿಸಿದರು.
ಮಕ್ಕಳಿಗೆ ವಿವಿಧ ಸ್ವರ್ದೆಗಳನ್ನು ಆಯೋಜಿಸಲಾಗಿತ್ತು.
p>