ಬೆಳಾಲು: ವಿದ್ಯುತ್ ಹೆಚ್ ಟಿ ಲೈನ್ ಗೆ ಅಲ್ಯೂಮಿನಿಯಂ ಏಣಿ ತಾಗಿ ವ್ಯಕ್ತಿ ಸಾವು

0

ಬೆಳಾಲು : ಸುರುಳಿ ವ್ಯಕ್ತಿಯೋರ್ವರಿಗೆ ಹೈಟೆನ್ಯನ್ ವಯರ್ ತಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆಯೊಂದು ನಡೆದಿದೆ. ಮೃತಗೀಡಾದವರನ್ನು ಅಂಗಾರ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡುತ್ತಿದ್ದರೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಬೆರಿಕೆ ಎಂಬಲ್ಲಿ ಹೈ ಟೆನ್ನನ್ ಲೈನ್ ಹಾದು ಹೋಗಿದ್ದು, ಇದನ್ನು ಗಮನಿಸಿದ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಅಲ್ಯುಮೀನಿಯಂ ಏಣಿ ತೆಗೆದುಕೊಂಡು ಹೋದ ಸಂದರ್ಭ ಈ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಏಣಿ HT ಲೈನಿಗೆ ತಗುಲಿದ್ದು, ಅಂಗಾರ (58 ವರ್ಷ) ಅವರಿಗೆ ತೀವ್ರ ಕರೆಂಟ್ ಶಾಕ್ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಪತ್ನಿ,4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here