

ಬೆಳ್ತಂಗಡಿ: ಕ್ರಾಸ್ ಬೆಂಗಳೂರು, ಕಾರಿತಾಸ್ ಇಂಡಿಯಾ ನವದೆಹಲಿ ಹಾಗೂ ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಆಶ್ರಯದಲ್ಲಿ ಸಂಸ್ಥೆಯ ಕಾರ್ಯತಂತ್ರ ಯೋಜನೆಯ ಬಗ್ಗೆ ತರಬೇತಿ ಕಾರ್ಯಾಗಾರವು ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ಆಗಸ್ಟ್ 11 ರಂದು ನಡೆಯಿತು.

ಜ್ಞಾನ ನಿಲಯದ ನಿರ್ದೇಶಕರಾದ ವಂದನೀಯ ಫಾ. ಜೋಸೆಫ್ ಮಟ್ಟಂರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ.ರಿಚರ್ಡ್ ಪಾಯಿಸ್, ಕ್ರಾಸ್ ಸಂಸ್ಥೆಯ ತರಬೇತಿ ಸಂಯೋಜಕರಾದ ವರ್ಗೀಸ್ ಜಿ.ಎಂ. ಹಾಗೂ ಕಾರಿತಾಸ್ ಇಂಡಿಯಾ ಸಂಸ್ಥೆಯ ಕರ್ನಾಟಕ ರಾಜ್ಯ ಅಧಿಕಾರಿಯಾದ ರಾಬರ್ಟ್ ಡಿ’ ಸೋಜಾರವರು ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಾಸ್ ಸಂಸ್ಥೆಯ ಸಿಬ್ಬಂದಿ ಬ್ರದರ್ ಅನಿಲ್ ಸೆಬಾಸ್ಟಿಯನ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿಯಾದ ಶ್ರೀಮತಿ ಸಿಸಿಲಿಯಾ ತಾವ್ರೊ ಸ್ವಾಗತಿಸಿದರು.
ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿ, ಕಾರ್ಯಕರ್ತರಾದ ಮಾರ್ಕ್ ಡಿ’ ಸೋಜಾರವರು ವಂದಿಸಿದರು. ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷೆ ಮಂಜುಳಾ ಜೋನ್, ಕಡಬ ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷೆ ಡೈಸಿ ಜೋಯಿ, ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಮಂಗಳೂರು ರೋಶನಿ ನಿಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.