ನಡ: ಬೆಳ್ತಂಗಡಿ ತಾಲೂಕು ಮಟ್ಟದ ಯೋಗ ಸ್ಪರ್ದೆ ಸರಕಾರಿ ಪ್ರೌಢಶಾಲೆ ನಡದಲ್ಲಿ ಆಯೋಜಿಸಲಾಗಿದ್ದು, ಅದರ ಉದ್ಘಾಟನೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ರವರು ನೆರವೇರಿಸಿದರು.
ಈ ಸ್ಪರ್ಧೆಯನ್ನು ಯೋಗಾಸನ ಮುದ್ರೆಯ ಪ್ರತಿಕೃತಿಯನ್ನು ಅನಾವರಣಗೊಳಿಸಿ ಹಾಗೂ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.ಉದ್ಘಾಟಿಸಿ ಮಾತನಾಡಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯೋಗವು ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತೀ ಅಗತ್ಯವೆಂದು ಹೇಳಿದರು.
ನಡ ಗ್ರಾಮ ಪಂಚಾಯತಿನ ನಿರ್ಗಮನ ಅಧ್ಯಕ್ಷರಾದ ವಿಜಯ ಗೌಡ ಇವರು ಅದ್ಯಕ್ಷತೆಯನ್ನು ವಹಿಸಿದ್ದು, ಭಾರತೀಯ ಪರಂಪರೆಯಾದ ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ದೇಶದ ಘನತೆಯನ್ನು ಹೆಚ್ಚಿಸುವವಲ್ಲಿ ಕಾಣಿಕೆ ನೀಡಲು ಕರೆ ನೀಡಿದರು.
ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕು ಸರ್ಕಾರಿ ನೌಕೃ ಸಂಘದ ಅಧ್ಯಕ್ಷರಾದ ಜಯರಾಜ್ ಜೈನ್, ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಸುಧಾಕರ್, ಸದಸ್ಯರುಗಳಾದ ಲಕ್ಷ್ಮಣ ನಾಯ್ಕ, ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಯಾಕೂಬ್ ಎಸ್ ಸ್ವಾಗತಿಸಿ, ದೈಹಿಕ ಶಿಕ್ಚಣ ಶಿಕ್ಷಕಿ ಸುಜಯ ಬಿ ಧನ್ಯವಾದವಿತ್ತರು.ಹಿಂದಿ ಶಿಕ್ಷಕ ಮೋಹನ ಬಾಬು ಕಾರ್ಯಕ್ರಮದ ನಿರೂಪಣೆಗೈದರು.ತಾಲೂಕಿನಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಿಂದ ನೂರಕ್ಕೂ ಮಿಕ್ಕಿದ ಸ್ಪರ್ಧಾಳುಗಳು ಭಾಗಹಿಸುತ್ತಿದ್ದಾರೆ.