ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೇಬಿ, ಉಪಾಧ್ಯಕ್ಷರಾಗಿ ಪ್ರಭಾಕರ್ ಆಯ್ಕೆ

0

ಕೊಕ್ಕಡ: ಗ್ರಾಮ ಪಂಚಾಯತ್ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶ್ರೀಮತಿ ಬೇಬಿ ಉಪಾಧ್ಯಕ್ಷರಾಗಿ ಪ್ರಭಾಕರ್ ಆಯ್ಕೆಯಾಗಿದ್ದಾರೆ.ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಪಂ.ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.ತದನಂತರ ನಡೆದ ಸಭೆಯಲ್ಲಿ ಬಿಜೆಪಿಯ ಹಿರಿಯರಾದ ಪೂವಾಜೆ ಕುಶಾಲಪ್ಪ ಗೌಡ ಶಕ್ತಿ ಕೇಂದ್ರದ ಕರುಣಾಕರ ಶಿಶಿಲ ಜನಾರ್ಧನ ಹಾಗೂ ಪಂಚಾಯತ್ ಸದಸ್ಯರು ನಿಕಟ ಪೂರ್ವ ಅಧ್ಯಕ್ಷರಾದ ಯೋಗೀಶ್ ಅಲಂಬಿಲ ನಿಕಟ ಪೂರ್ವ ಉಪಾಧ್ಯಕ್ಷರಾದ ಪವಿತ್ರ ಗುರುಪ್ರಸಾದ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪೂವಾಜೆ ಕುಶಾಲಪ್ಪ ಗೌಡರು ಮಾತನಾಡಿ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷ ರಿಗೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here