ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಗಾಯತ್ರಿ, ಉಪಾಧ್ಯಕ್ಷರಾಗಿ ಸುಧೀಂದ್ರ ಕುಮಾರ್ ಎಂ ಎಸ್ ಅವಿರೋಧವಾಗಿ ಆಯ್ಕೆ

0

ಅರಸಿನಮಕ್ಕಿ: ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷರಾಗಿ ವಾರ್ಡ್ ನಂಬರ್ ರೇಖ್ಯ 2 ರ ಸದಸ್ಯೆ ಗಾಯತ್ರಿ, ಉಪಾಧ್ಯಕ್ಷರಾಗಿ ವಾರ್ಡ್ ನಂಬರ್ 1 ರ ಸದಸ್ಯ ಸುಧೀಂದ್ರ ಕುಮಾರ್ ಎಂ.ಎಸ್ ಅವಿರೋಧವಾಗಿ ಆಯ್ಕೆ.

ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಹಾಗೂ ಇವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬನಪ ಗೌಡ್ರು ಸಹಕರಿಸಿದರು.

ತದನಂತರ ನಡೆದ ಸಭೆಯಲ್ಲಿ ಬಿಜೆಪಿಯ ಮಹಾಶಕ್ತಿ ಕೇಂದ್ರದ ಕರುಣಾಕರ ಶಿಶಿಲ ಶಿಬಾಜೆ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರತೀಶ್ ಬೇಂಗಳ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮಂಜುಳಾ ಕಾರಂತ್ ಮುಂತಾದವರು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಶುಭಾಷಯ ತಿಳಿಸಿದರು

ಸಭೆಯಲ್ಲಿ ಸುಂದರ ರಾಣ್ಯ ಮುದ್ದಿಗೆ ಇವರು ಮಾತನಾಡಿ ಉತ್ತಮ ಸೇವೆ ಮಾಡಲು ಅವಕಾಶ ಸಿಕ್ಕಿದೆ ಉಪಯೋಗಿಸಿಕೊಂಡು ಉತ್ತಮ ಆಡಳಿತ ನೀಡಿ ಎಂದು ಸಲಹೆ ನೀಡಿದರು.

LEAVE A REPLY

Please enter your comment!
Please enter your name here