ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಧರ್ಮಸ್ಥಳದ ಸುಭಾಶ್ ಗೌಡರಿಗೆ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಟ ದಲ್ಲಿ ಚಿನ್ನದ ಪದಕ

0

ಆ.7 ರಂದು ಶಿವಮೊಗ್ಗದಲ್ಲಿ ನಡೆದ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ ಇದರಲ್ಲಿ ಧರ್ಮಸ್ಥಳದ ಸುಭಾಶ್ ಗೌಡ ರವರು, ಬ್ಲಾಕ್ ಬೆಲ್ಟ್ 21ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅಂತರ್ ಜಿಲ್ಲಾ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಟ ದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಇವರು ಎಸ್. ಡಿಮ್. ಎಂ ಕಾಲೇಜು, ಉಜಿರೆಯ ವಿದ್ಯಾರ್ಥಿಯಾಗಿದ್ದು, ಧರ್ಮಸ್ಥಳದ ಸೂರ್ಯ ಗೌಡ ಮತ್ತು ಶೋಭ ದಂಪತಿಯ ಪುತ್ರ.ಇವರು ಶಿಹಾನ್ ಅಬ್ದುಲ್ ರಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here