ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ದಯಾಮಣಿ, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

0

ಕೊಯ್ಯೂರು: ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು ದಯಾಮಣಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸಾಮಾನ್ಯ ಹರೀಶ್ ಗೌಡ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಲಿಖಿತ ರಾಜ್ ತೋಟಗಾರಿಕೆ ಇಲಾಖೆ ಮದ್ದಡ್ಕ ಭಾಗವಹಿಸಿದ್ದರು.ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್, ಬೆಳ್ತಂಗಡಿ ಠಾಣೆಯ ಕೊಯ್ಯೂರು ಬೀಟ್ ಪೋಲಿಸ್‌ ವಿಶ್ವನಾಥ್ ಸಹಕರಿಸಿದರು. ಮತದಾನ ಮಾಡುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು.

13 ಜನ ಸದಸ್ಯರನ್ನು ಹೊಂದಿರುವ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ 3 ಅಭ್ಯರ್ಥಿಗಳು ನಾಮ ಪತ್ರವನ್ನು ಸಲ್ಲಿಸಿದ್ದು ದಯಾಮಣಿ, ವಿಶಾಲಾಕ್ಷಿ, ಹೇಮಾವತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಮತ್ತು ಲೋಕೇಶ್ ನಾಮಪತ್ರ ಸಲ್ಲಿಸಿದರು.ಹೇಮಾವತಿ ನಾಮಪತ್ರ ಹಿಂಪಡೆದರು.ದಯಾಮಣಿ 8 ಮತಗಳು, ವಿಶಾಲಾಕ್ಷಿ 5 ಮತಗಳು, ಹರೀಶ್ 7 ಮತಗಳು, ಲೋಕೇಶ್ 6 ಮತಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here