ಉಜಿರೆ: ಅನುಗ್ರಹ ಶಾಲಾ ನವೀಕೃತ ಕಛೇರಿಗಳ ಉದ್ಘಾಟನೆ

0

ಉಜಿರೆ: ಅನುಗ್ರಹ ಶಾಲಾ ಪಿಯುಸಿ ಹಾಗೂ ಹೈಸ್ಕೂಲ್ ವಿಭಾಗದ ನವೀಕೃತ ಕಛೇರಿ ಹಾಗೂ ಪ್ರಾಂಶುಪಾಲರ ಕೊಠಡಿಯ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ವಂ! ಫಾ! ಜೇಮ್ಸ್ ಡಿ’ಸೋಜರವರು ನೆರವೇರಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು.

ನೂತನ ಕೊಠಡಿಗಳ ನವೀಕರಣಕ್ಕೆ ಸಹಕರವನ್ನಿತಿರುವ ಶ್ರೀಮತಿ ಮತ್ತು ಶ್ರೀ ರಿಚ್ಚಾರ್ಡ್ ಗ್ರೇಸಿ ಸಲ್ಡಾನ, ಎಸ್.ಎ ಬ್ರದರ್ಸ್ ಪರವಾಗಿ ಅನಿಲ್ ಡಿ’ಸೋಜಾ ಹಾಗೂ ಅರುಣ್ ರೆಬೆಲ್ಲೊ ರವರ ಸಹಕಾರಕ್ಕೆ ಶಾಲಾ ಪ್ರಾಂಶಪಾಲರಾದ ವಂ!ಪಾ! ವಿಜಯ್ ಲೋಬೊ ರವರು ಕೃತಜ್ಞತೆಯನ್ನು ಸಲ್ಲಿಸಿ ಅವರನ್ನು ಹೂ ನೀಡಿ ಗೌರವಿಸಿದರು.

ಶಾಲಾ ಸಂಚಾಲಕರು ನವೀಕೃತ ಕೊಠಡಿಗಳಲ್ಲಿ ಶಾಲಾ ಕೆಲಸಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯಲೆಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯೆಯಾದ ಅನಿತಾ ಮೋನಿಸ್ ಹಾಗೂ ಜೋಯೆಲ್ ಪಾಯಸ್, ರೀಟಾ ಪಿಂಟೋ, ಆಸ್ಟಿನ್ ವೇಗಸ್ ಉಪಸ್ಥಿತರಿದ್ದರು.ಪ್ರಭಾಕರ ಶೆಟ್ಟಿಯವರು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here