

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಳ್ತಂಗಡಿ ನಗರ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಸಂತ ತೆರೇಸಾ ಪ್ರೌಢ ಶಾಲೆ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದು ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಪ್ರೌಢ ವಿಭಾಗದಿಂದ ಭಾಷಣ ನವಮಿ – ಪ್ರಥಮ, ದೇಶ ಭಕ್ತಿ ಗೀತೆ ಮಾನ್ಯ – ತೃತೀಯ, ಹಿರಿಯ ಪ್ರಾಥಮಿಕ ವಿಭಾಗ ಭಾಷಣ ಪ್ರಾಪ್ತಿ-ಪ್ರಥಮ, ದೇಶ ಭಕ್ತಿ ಗೀತೆ ಮನೀಷಾ – ಪ್ರಥಮ, ಪ್ರಬಂಧ ಅದ್ವಿತ – ತೃತೀಯ, ಕಿರಿಯ ಪ್ರಾಥಮಿಕ ವಿಭಾಗ, ದೇಶ ಭಕ್ತಿ ಗೀತೆ ಶಾರ್ವಿ – ಪ್ರಥಮ, ಚಿತ್ರಕಲೆ ಆದ್ಯ – ದ್ವಿತೀಯ ಸ್ಥಾನ ಪಡೆದಿರುತ್ತಾರೆ.