ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು,ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು,ಬಂಟರ ಸಂಘ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹಧನ ವಿತರಣಾ ಸಮಾರಂಭ

0

ಗುರುವಾಯನಕೆರೆ : ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು,ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು,ಬಂಟರ ಸಂಘ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭವು ಗುರುವಾಯನಕೆರೆ ಬಂಟರ ಭವನದ ಮಾಲಾಡಿ ತುಂಗಾ ಮತ್ತು ಮುಂಡಪ್ಪ ಶೆಟ್ಟಿ ವೇದಿಕೆಯಲ್ಲಿ ಆ.6ರಂದು ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಡಿ ಎಮ್ ಕಾಲೇಜು ಉಜಿರೆಯ ಪ್ರಾಚಾರ್ಯ ಡಾ| ಬಿ.ಎ.ಕುಮಾರ್ ಹೆಗ್ಡೆ ನೇರವೆರಿಸಿದರು.ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮಾತನಾಡಿ ಯುವ ಜನತೆ ಜಾತಿ ಎಂಬ ಭಾವನೆಯಲ್ಲಿ ಮುಂದುವರಿಯಾದೆ ಸಮಾಜ ಹಾಗೂ ಹಿಂದೂ ಸಮಾಜದ ಏಳಿಗೆಗೆ ಪ್ರಯತ್ನಿಸುತ್ತಿರುವರಿಗೆ ಸಹಕರಿಯಾಗಬೇಕು, ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಸಿ ಇನ್ನೊಬ್ಬರಿಗೆ ಉದ್ಯೋಗವನ್ನು ನೀಡುವಂತಾಗಬೇಕು ಯುವ ಜನತೆಗೆ ಸಮಾಜದ ಅನೇಕ ಸಾಧಕ ವ್ಯಕ್ತಿಗಳು ಪ್ರೇರಣೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಬಡತನ, ಟೀಕೆ ಟಿಪ್ಪಣಿಗಳನ್ನು ಕೇಳಿದ್ದು ಇಂದು ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳೆದು ನಿಂತವರು ಇದ್ದಾರೆ ಅವರ ಸಾಧನೆಗಳು ನಮಗೆ ಪ್ರೇರಣೆ ವಿದ್ಯಾರ್ಥಿಗಳು ಸಮಾಜ ದೇಶವನ್ನು ಬೆಳೆಸುವಂತಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿಯ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317ಡಿ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಲ| ಸಂಜೀತ್ ಶೆಟ್ಟಿ ಪಿ.ಎಮ್.ಜೆ.ಎಫ್., ವಿದ್ಯಾರ್ಥಿ ನಿಧಿ ಸಂಚಾಲಕ ವಿಠಲ ಶೆಟ್ಟಿ ಸಾಕೇತ ಉಜಿರೆ, ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಟನಿ, ಕೋಶಾಧಿಕಾರಿ ಕೆ.ಎನ್.ಆನಂದ ಶೆಟ್ಟಿ ಐಸಿರಿ, ಜೊತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ,ಬಂಟ ಯುವ ವಿಭಾಗ ಅಧ್ಯಕ್ಷ ಸುಜಯ್ ಶೆಟ್ಟಿ ಬಾರ್ದಾಜೆ,ಬಂಟರ ಮಹಿಳಾ ವಿಭಾಗದ ಅಧ್ಯಕ್ಷ ಶೋಭಾ ವಿ. ಶೆಟ್ಟಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಕಾರ್ಯಕಾರಿ ಸಮಿತಿಯ ಜಯಂತ ಶೆಟ್ಟಿ, ಬೆಳ್ತಂಗಡಿ ಮಾತೃ ಸಂಘದ ಸಂಚಾಲಕ ಜಯರಾಮ ಭಂಡಾರಿ ಮತ್ತು ಬಂಟರ ಯಾನೆ ನಾಡವರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಪೋಷಕರು ಸಮಾಜದ ಪ್ರಮುಖರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷ ಕೆ.ವಿಠಲ್ ಶೆಟ್ಟಿ ಕೊಲ್ಲೊಟ್ಟು ಸ್ವಾಗತಿಸಿ, ವಸಂತ್ ಶೆಟ್ಟಿ ಶ್ರದ್ದಾ ನಿರೂಪಿಸಿದರು.

LEAVE A REPLY

Please enter your comment!
Please enter your name here