ವೇಣೂರು: ಮಾಜಿ ಶಾಸಕ ಕೆ.ವಸಂತ ಬಂಗೇರರ ವಿರುದ್ಧ ಮಾನಹಾನಿ ಆಗುವ ರೀತಿಯಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾನೆಂದು ಆರೋಪಿಸಿ ವಸಂತ ಗಿಳಿಯಾರ್ ಎಂಬ ಫೇಸ್ಬುಕ್ ಖಾತೆಯ ವಿರುದ್ಧ ವಸಂತ ಬಂಗೇರ ಅಭಿಮಾನಿಗಳ ಬಳಗ ವೇಣೂರು ನಿಯೋಗ ಇಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದೆ.
ಮಾಜಿ ಶಾಸಕ ಕೆ.ವಸಂತ ಬಂಗೇರರವರ ಹೆಸರನ್ನು ಅನಾವಶ್ಯಕವಾಗಿ ಬಳಸಿ ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಸುದ್ದಿಯನ್ನು ಹರಡಲು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಂಡಿರುವ ವಸಂತ ಗಿಳಿಯಾರ್ ಎಂಬಾತನ ವಿರುದ್ಧ ಹಾಗೂ ಈ ಸುಳ್ಳುಸುದ್ದಿಯನ್ನು ಪೋಸ್ಟ್ ಮಾಡಿ ಕೋಮು ಸೌಹಾರ್ದತೆಗೆ ಭಂಗ ತಂದಿರುವ ಇತರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ದೂರನ್ನು ಸ್ವೀಕರಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.ನಿಯೋಗದಲ್ಲಿ ಪ್ರಮುಖರಾದ ಸತೀಶ್ ಕೆ. ಕಾಶಿಪಟ್ಟ, ನಿತೀಶ್ ಎಚ್., ಸತೀಶ್ ಹೆಗ್ಡೆ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಹರೀಶ್ ಕುಮಾರ್, ವಿ.ಪ್ರಭಾಕರ ಹೆಗ್ಡೆ ಹಟ್ಟಾಜೆ, ನ್ಯಾಯವಾದಿ ಸತೀಶ್ ಪಿ.ಯನ್., ಅಶೋಕ ಪಾಣೂರು, ರಾಕೇಶ್ ಕುಮಾರ್ ಮೂಡುಕೋಡಿ, ನವೀನ್ ಪೂಜಾರಿ ಪಚ್ಚೇರಿ, ಸೂರ್ಯನಾರಾಯಣ ಡಿ.ಕೆ., ಸುದರ್ಶನ ಕೋಟ್ಯಾನ್, ಗಣೇಶ್ ದೇವಾಡಿಗ, ಸತೀಶ್ ಕಜಿಪಟ್ಟ, ಪ್ರವೀಣ್ ಪಿಂಟೋ, ತೋಮಸ್ ಆರ್.ನೊರೊನ್ಹಾ, ಪಿ.ದೇಜಪ್ಪ ಶೆಟ್ಟಿ, ಅರವಿಂದ ಶೆಟ್ಟಿ, ವಿಶ್ವನಾಥ ಪೂಜಾರಿ, ಅಶೋಕ ಭಂಡಾರಿ ಮತ್ತಿತರ ಪ್ರಮುಖರು ಹಾಜರಿದ್ದರು.