ಕಣಿಯೂರು ಗ್ರಾಮ ಪಂಚಾಯಿತ್ ಗೆ ಡಿಎಸ್ ಭೇಟಿ- ಕಾಮಗಾರಿಗಳ ಪರಿಶೀಲನೆ

0

ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತ್ ಗೆ ದಕ ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಆನಂದ ರವರು ಜು.3 ರಂದು ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಕಣಿಯೂರು ಗಣತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ವೀಕ್ಷಣೆ, ಮಹಾತ್ಮಾ ಗಾಂಧಿ ಎನ್ ಆರ್ ಇ ಜಿ ಎ ಕಾಮಗಾರಿಗಳ ವೀಕ್ಷಣೆ, ಕಣಿಯೂರು ಗ್ರಾಮ ಪಂಚಾಯಿತ್ ನ ಗ್ರಂಥಾಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಗ್ರಂಥಾಲಯ ಮೇಲ್ವಿಚಾರಕಿ ರೇವತಿಯವರು ಉಪಸ್ಥಿತರಿದ್ದರು.ತಾಲೂಕು ಪಂಚಾಯಿತಿ ವಿಷಯ ನಿರ್ವಾಹಕರಾದ ಗಣೇಶ್ ಪೂಜಾರಿ, ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ರಮೇಶ್, ಪಂ.ಸಿಬ್ಬಂದಿ ಉಮೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here