ಕೊಯ್ಯೂರು ಸ.ಪ್ರೌ.ಶಾಲಾ ವಿದ್ಯಾರ್ಥಿ ಸಂಘ ಉದ್ಘಾಟನೆ

0

ಕೊಯ್ಯೂರು: ಸರಕಾರಿ ಪ್ರೌಢಶಾಲೆ ಕೊಯ್ಯೂರು ಇಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಶಾಲಾ ಪಾರ್ಲಿಮೆಂಟ್ ಉದ್ಘಾಟನೆ ಜು.28ರಂದು ನಡೆಯಿತು.ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಜೈನ್ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.ಬಳಿಕ ನಡೆದ ಅಣಕು ಪಾರ್ಲಿಮೆಂಟ್‌ನಲ್ಲಿ ರಾಷ್ಟ್ರಪತಿ ಭಾಷಣ ಮಾಡಿದರು.ನಂತರ ನಡೆದ ಕಲಾಪವನ್ನು ವೀಕ್ಷಿಸಿದರು.ಬಳಿಕ ವಿದ್ಯಾರ್ಥಿಗಳನ್ನು ಕುರಿತು ಭಾಷಣ ಮಾಡುತ್ತಾ ರಾಜಕೀಯ ಒಂದು ಉದ್ಯೋಗವಾಗಬಾರದು ಅದೊಂದು ಜವಾಬ್ಧಾರಿಯಾಗಿದೆ.ನಾಯಕ ಯಾವತ್ತೂ ಸ್ಥಾನದಿಂದ ಆಗಬಾರದು ಬದಲಾಗಿ ಆತನ ನಡವಳಿಕೆಯಿಂದ ಆಗಬೇಕು.ಶಿಕ್ಷಣದ ಬೇರು ಕಹಿ ಆದರೂ ಅದರ ಫಲ ಎಂದಿಗೂ ಸಿಹಿಯಾಗಿರುತ್ತದೆ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಬೇಕು ಎಂದರು.

ಶಾಲೆಯಲ್ಲಿ ನಡೆದ ವಿದ್ಯಾರ್ಥಿ ನಾಯಕ ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಪೂರ್ಣೇಶ್ ಹತ್ತನೇ ತರಗತಿ ಆಯ್ಕೆಯಾಗಿರುತ್ತಾರೆ. ಸಭಾಪತಿಯಾಗಿ ಶಹದಿಯಾ ಹತ್ತನೇ ತರಗತಿ ಕಲಾಪ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜು ಇಲ್ಲಿಯ ಆಡಳಿತಾಧಿಕಾರಿ ಪುರುಷೋತ್ತಮ, ಲೆಕ್ಕಾಧಿಕಾರಿ ಋತೇಶ್ ಪ್ರಾಚೀನ ವಸ್ತು ಸಂಗ್ರಹಕಾರ ಹೈದರಾಲಿ ಹಳ್ಳಿಮನೆ ಉಪಸ್ಥಿತರಿದ್ದರು.

ಶಿಕ್ಷಕಿ ಬೇಬಿ, ದೀಪ್ತಿ ಹೆಗ್ಡೆ, ಗೀತಾ ಉಡುಪಿ, ಸುಧಾಕರ ಶೆಟ್ಟಿ, ಪ್ರವೀಣ್ ಕುಮಾರ್, ಮೋಹನದಾಸ ಸಹಕರಿಸಿದರು.ರಾಮಚಂದ್ರ ದೊಡಮನಿ ವಂದಿಸಿದರು.

LEAVE A REPLY

Please enter your comment!
Please enter your name here